ರೇಖಾ ಸುದೇಶ್ ರಾವ್ ಅವರ ಹೊಂಬೆಳಕು ಕವನ ಸಂಕಲನ ಲೋಕಾರ್ಪಣೆ…

ಮಂಗಳೂರು: ಮಂಗಳೂರಿನ ಪಿ.ವಿ.ಪ್ರದೀಪ್ ಕುಮಾರ್ ಸಾರಥ್ಯದ ಕಥಾಬಿಂದು ಪ್ರಕಾಶನದ ಹದಿನಾರನೇ ವಾರ್ಷಿಕ ಸಾಹಿತ್ಯೋತ್ಸವ ಸಮಾರಂಭದಲ್ಲಿ ಮಂಗಳೂರಿನ ಮಂಗಳಾದೇವಿ ನಿವಾಸಿ ಶ್ರೀಮತಿ ರೇಖಾ ಸುದೇಶ ರಾವ್ ಇವರ ಹೊಂಬೆಳಕು ಕವನ ಸಂಕಲನವು ಮೂಡುಬಿದಿರೆಯ ಶ್ರೀಪತಿ ಭಟ್ ಇವರ ದಿವ್ಯ ಹಸ್ತದಿಂದ ಅ. 29 ರಂದು ಪುರಭವನದಲ್ಲಿ ಲೋಕಾರ್ಪಣೆ ಗೊಂಡಿತು.
ಮಂಗಳೂರಿನ ವೈದ್ಯ ,ಬರಹಗಾರ ಡಾ ಸುರೇಶ ನೆಗಳಗುಳಿಯವರು ಕೃತಿಯ ಬಗ್ಗೆ ವಿಮರ್ಶೆ ಮಾಡುತ್ತಾ ಅದರೊಳಗಿನ ಹೂರಣದ ರಚನೆಯೊಂದನ್ನು ವಾಚಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂಬಯಿಯ ಸರ್ವ ಅರಸ ಶೆಟ್ಟಿ,ವಾಮನ್ ರಾವ್ ಬೇಕಲ್, ಕೊಳ್ಚಪ್ಪೆ ಗೋವಿಂದ ಭಟ್,ರಾಧಾಕೃಷ್ಣ ಉಳಿಯತ್ತಡ್ಕ,ಜಯಾನಂದ ಪೆರಾಜೆ , ಪಿ.ವಿ. ಪ್ರದೀಪ್ ಕುಮಾರ್ ವೇದಿಕೆಯಲ್ಲಿದ್ದರು.