ಯಕ್ಷ ತ್ರಿವೇಣಿ ಯಕ್ಷಗಾನ ತಾಳಮದ್ದಳೆ ಅಭಿಯಾನ – 750ರ ಸಂಭ್ರಮ…

ಬಂಟ್ವಾಳ: ವಿಶ್ವ ಭಾರತಿ ಯಕ್ಷ ಸಂಜೀವಿನಿ (ರಿ) ಮುಡಿಪು, ತುಳು ಶಿವಳ್ಳಿ ಸೇವಾ ಟ್ರಸ್ಟ್ ಬಂಟ್ವಾಳ ಸಂಯುಕ್ತಾಶ್ರಯದಲ್ಲಿ ಯಕ್ಷ ತ್ರಿವೇಣಿ ಯಕ್ಷಗಾನ ತಾಳಮದ್ದಳೆ ಅಭಿಯಾನ 750ರ ಸಂಭ್ರಮ ಬಿ ಸಿ ರೋಡು ಶಿವಳ್ಳಿ ಸಭಾಭವನದಲ್ಲಿ ಜರಗಿತು.
ಕಾರ್ಯಕ್ರಮವನ್ನು ಹಿರಿಯ ಯಕ್ಷಗಾನ ಕಲಾವಿದ ಕೆ ಗೋವಿಂದ ಭಟ್ ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನು ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ವಹಿಸಿದ್ದರು. ಎಂ ಪರಮೇಶ್ವರ ಹೊಳ್ಳ ಅತಿಥಿಯಾಗಿದ್ದರು. ಪ್ರಶಾಂತ್ ಹೊಳ್ಳ ನೇತೃತ್ವದಲ್ಲಿ ಪುರುಷೋತ್ತಮ ಭಟ್, ಮುರಾರಿ ಕಡಂಬಳಿತ್ತಾಯ, ಶಂಬು ಶರ್ಮ ವಿಟ್ಲ, ನಾ. ಕಾರಂತ ಪೆರಾಜೆ, ಕುಶಲ ಮಡಿಪು ಸಹಯೋಗದಲ್ಲಿ ಸುಧನ್ವಾರ್ಜುನ ತಾಳ ಮದ್ದಳೆ ನಡೆಯಿತು.