ಗುತ್ತಿಗಾರು – ಗ್ರಾಪಂ ಚುನಾವಣಾ ಅಭ್ಯರ್ಥಿಗಳಿಂದ ಮತಯಾಚನೆ…

ಸುಳ್ಯ: ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಒಂದನೇ ವಾರ್ಡ್ ನಲ್ಲಿ ಚುನಾವಣಾ ಕಣದಲ್ಲಿ ಕುತೂಹಲ ಹೆಚ್ಚಾಗಿದೆ. ಗ್ರಾಮವನ್ನು ಅಭಿವೃದ್ಧಿಯ ಪಥದಲ್ಲಿ ಸಾಗಿಸುವ ಉದ್ದೇಶದಿಂದ ಕಣಕ್ಕೆ ಇಳಿದಿರುವ ಗ್ರಾಮ ಭಾರತ ತಂಡದ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ವಾರ್ಡ್ ನಲ್ಲಿ ಸೇತುವೆ, ರಸ್ತೆ ಸೇರಿದಂತೆ ವಿವಿಧ ಮೂಲಭೂತ ಸಮಸ್ಯೆಗಳು ಹಲವು ವರ್ಷಗಳಿಂದ ಇರುವ ಕಾರಣದಿಂದ ರಾಜಕೀಯ ಪಕ್ಷಗಳ ಕಾರ್ಯವೈಖರಿಗೆ ಬೇಸತ್ತು ಈ ಬಾರಿ ಚುನಾವಣೆಗೆ ಸ್ಫರ್ಧೆ ನಡೆಸಿದ್ದಾರೆ. ಕಮಿಲ, ಮೊಗ್ರ, ಬಳ್ಳಕ್ಕ ಸೇರಿದಂತೆ ವಿವಿದೆಡೆ ಅಭ್ಯರ್ಥಿಗಳಾದ ಎಂ ಕೆ ಶಾರದಾ, ಲತಾ ಕುಮಾರಿ , ಭರತ್ ಕೆವಿ ಹಾಗೂ ವಸಂತ ಮೊಗ್ರ ಅವರು ತಂಡದ ಸದಸ್ಯರು ಮತಯಾಚನೆ ಮಾಡುತ್ತಿದ್ದಾರೆ.