ಶಾಂತಾ ಪುತ್ತೂರುರವರಿಗೆ ಚುಟುಕು ಚೇತನ ರಾಜ್ಯ ಪ್ರಶಸ್ತಿ…

ಉಡುಪಿ : ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ (ರಿ) ಕೇಂದ್ರ ಸಮಿತಿ ಹುಬ್ಬಳ್ಳಿ ಜಿಲ್ಲಾ ಸಮಿತಿ ಉಡುಪಿ,ದ.ಕ . ಹಾಗೂ ಪರ್ಯಾಯ ಶ್ರೀ ಕೃಷ್ಣಾಪುರ ಮಠ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಪುಸ್ತಕ ದಾನ ಹಾಗೂ ಜಿಲ್ಲಾ ಸಮ್ಮೇಳನ ಸಂಭ್ರಮ ಆ.13 ರಂದು ಉಡುಪಿ ರಾಜಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮ ದಲ್ಲಿ ಮೂಲತಃ ಬಾರಕೂರಿನವರಾಗಿದ್ದು ಪುತ್ತೂರು ಬೊಳುವಾರು ನಿವಾಸಿಯಾಗಿರುವ ಸರಕಾರಿ ಪ್ರೌಢಶಾಲೆ ಕಬಕದ ಶಿಕ್ಷಕಿ ಶಾಂತಾ ಪುತ್ತೂರುರವರ ಶಿಕ್ಷಣ ಹಾಗೂ ಸಾಹಿತ್ಯ ಸೇವೆಯನ್ನು ಗುರುತಿಸಿ ಪರ್ಯಾಯ ಶ್ರೀ ಕೃಷ್ಣಾಪುರ ಮಠ ಶ್ರೀಗಳ ದಿವ್ಯ ಸಾನಿಧ್ಯ ದಲ್ಲಿ ಗೌರವಿಸಲಾಯಿತು. ಅಲ್ಲದೆ ಶ್ರೀ ಎನ್ ರಾಜು ಆಚಾರ್ಯ ಕ.ಚು.ಸಾ.ಪ.ಉಡುಪಿ,ಪ್ರೊ.ಜಿ.ಯು.ನಾಯಕ ಇವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಮ್ಮೇಳನ ಸಭಾಧ್ಯಕ್ಷ ರಾದ ಪ್ರೋ.ಜಿ.ಯು.ನಾಯಕ,ಕ.ಚು.ಸಾ.ಪ ರಾಜ್ಯ ಸಂಚಾಲಕರಾದ ಶ್ರೀ ಕೃಷ್ಣ ಮೂರ್ತಿ ಕುಲಕರ್ಣಿ,ಶ್ರೀ ಎನ್ ರಾಜು ಆಚಾರ್ಯ ಕ.ಚು.ಸಾ.ಪ.ಉಡುಪಿ, ಶ್ರೀ ರವೀಂದ್ರ ಶೆಟ್ಟಿ ಬಳಂಜ ಅಧ್ಯಕ್ಷರು ಕರಾವಳಿ ಕರ್ನಾಟಕ ವಿಭಾಗೀಯ ಘಟಕ, ಶೇಖರಗೌಡ ಪಾಟೀಲ ರಟ್ಟೆಹಳ್ಳಿ ತಾಲೂಕು ಕ.ಚು.ಸಾ.ಪ.ಅಧ್ಯಕ್ಷರು,ಕವಿ,ಕು.ಗೋಪಾಲಭಟ್ಟರು ಹಿರಿಯ ಕವಿಗಳು,ಸಂಘಟಕ ಪತ್ರಕರ್ತ ಡಾ.ಶೇಖರ್ ಅಜೆಕಾರು,ಕು.ಗೋಪಾಲಭಟ್ಟರು ಹಿರಿಯ ಕವಿಗಳು, ಶ್ರೀ.ವಿಶ್ವನಾಥ ಶೆಣೈ ಹಿರಿಯ ಚಿಂತಕರು ಉಡುಪಿ,ಅಂಶುಮಾಲಿ ನಿಕಟಪೂರ್ವ ಸಮ್ಮೇಳನಾಧ್ಯಕ್ಷರು, ಜಯಾನಂದ ಪೆರಾಜೆ ಕ.ಚು.ಸಾ.ಪ.ಜಿಲ್ಲಾಧ್ಯಕ್ಷರು, ಗುರುರಾಜ್ ಎಂ.ಆರ್.ಕಾಸರಗೋಡು,ಡಾ.ವಾಣಿಶ್ರೀ ಕಾಸರಗೋಡು ಉಪಸ್ಥಿತರಿದ್ದರು.

whatsapp image 2023 08 15 at 6.57.21 pm
Sponsors

Related Articles

Back to top button