ಅರಂತೋಡು ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ…

ಸುಳ್ಯ: ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ನಡೆಯಿತು.
ಕಾಲೇಜಿನ ಸಂಚಾಲಕರಾದ ಶ್ರೀ ಕೆ ಆರ್ ಗಂಗಾಧರ್ ಧ್ವಜಾರೋಹಣಗೈದರು. ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅರಂತೋಡು ಗ್ರಾಮ ಪಂಚಾಯಿತಿಯ ಸದಸ್ಯರು ಮತ್ತು ನಿಯೋಜಿತ ಅಧ್ಯಕ್ಷರಾದ ಶ್ರೀ ಕೇಶವ ಅಡ್ತಲೆ, ನಿವೃತ್ತ ಸೈನಿಕ ಉತ್ತಪ್ಪ ಮುಂಡೋಡಿ ಮತ್ತು ಸುಳ್ಯ ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಿತಿನ್ ಪ್ರಭು ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಪ್ಯುಲರ್ ಎಜುಕೇಶನ್ ಸೊಸೈಟಿ ಯ ಉಪಾಧ್ಯಕ್ಷ ಜತ್ತಪ್ಪ ಮಾಸ್ಟರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಳೆದ ಸಾಲಿನ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ 35 ವಿದ್ಯಾರ್ಥಿಗಳಿಗೆ ತಲಾ ಒಂದು ಸಾವಿರ ನಗದು ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಕೇಶವ ಅಡ್ತಲೆಯವರು ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೊಡಮಾಡುವ ದತ್ತಿ ನಿಧಿಯ ರೂಪಾಯಿ ಹತ್ತು ಸಾವಿರವನ್ನು ಪ್ರಾಂಶುಪಾಲರಿಗೆ ಹಸ್ತಾಂತರ ಮಾಡಲಾಯಿತು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಮೂವರು ಅತಿಥಿಗಳ ಸಾಧನೆಗಳನ್ನು ಗುರುತಿಸಿ ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಪ್ರಾಂಶುಪಾಲರಾದ ರಮೇಶ ಸ್ವಾಗತಿಸಿದರು. ಮುಖ್ಯೋಪಾಧ್ಯಾಯರಾದ ಸೀತಾರಾಮ ವಂದಿಸಿದರು.
ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಂಗ್ಲ ಭಾಷಾ ಉಪನ್ಯಾಸಕಿ ಶ್ರೀಮತಿ ಅಶ್ವಿನಿ ನಿರ್ವಹಿಸಿದರು. ಇತಿಹಾಸ ಉಪನ್ಯಾಸಕ ಶ್ರೀ ಮೋಹನ್ ಚಂದ್ರ ಕಾರ್ಯಕ್ರಮ ನಿರೂಪಿಸಿದರು.ಸಂಸ್ಥೆಯ ಭೋದಕ ಮತ್ತು ಬೋಧಕೇತರ ವರ್ಗದ ಸುರೇಶ್ ವಾಗ್ಲೆ, ಸೋಮಶೇಖರ್, ಜಯರಾಮ್, ಶಾಂತಿ, ಪದ್ಮಕುಮಾರ್, ಕಿಶೋರ್ ಕುಮಾರ್,ಧನ್ಯರಾಜ್, ಚಿದಾನಂದ, ಭಾಗ್ಯಶ್ರೀ, ವಿದ್ಯಾಶಾಲಿನಿ,ಸಂದೇಶ್ ಸಹಕರಿಸಿದರು. ಆಡಳಿತ ಮಂಡಳಿಯ ನಿರ್ದೇಶಕ ಸಂಶುದ್ದೀನ್ ಭೋಜನಕ್ಕೆ ಮತ್ತು ಹಿರಿಯ ವಿದ್ಯಾರ್ಥಿಗಳಾದ ಡಾ.ನಿತಿನ್ ಪ್ರಭು, ಜಯಂತ್ ಅಮೈ, ಧನ್ಯರಾಜ್ ಸಿಹಿತಿಂಡಿಗಳನ್ನು ನೀಡಿ ಸಹಕರಿಸಿದರು.

whatsapp image 2023 08 16 at 8.55.29 am
whatsapp image 2023 08 16 at 8.55.29 am (1)
Sponsors

Related Articles

Back to top button