ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯ – ಇಲೆಕ್ಟ್ರಾನಿಕ್ಸ್ ವಿಭಾಗದ ವತಿಯಿಂದ ತಾಂತ್ರಿಕ ಕಾರ್ಯಾಗಾರ…

ಮೂಡುಬಿದ್ರಿ: ಇಲ್ಲಿನ ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ವತಿಯಿಂದ ಆಯೋಜಿಸಲಾಗಿರುವ ” ಸರ್ಕ್ಯೂಟ್ ಕ್ರಿಯೇಷನ್, ಸಿಮ್ಯುಲೇಶನ್ ಆಂಡ್ ಅನಾಲಿಸಿಸ್ ಯೂಸಿಂಗ್ ಮಲ್ಟಿಸಿಮ್ ಆಂಡ್ ಪ್ರೋಟಿಯಸ್” ಎಂಬ ವಿಷಯದ ಕುರಿತಾದ 3 ದಿನಗಳ ತಾಂತ್ರಿಕ ಕಾರ್ಯಾಗಾರದ ಉದ್ಘಾಟನಾ ಸಮಾರಂಭ ನ.8 ರಂದು ನಡೆಯಿತು.
ಕಾಲೇಜಿನ IEEE ಹಾಗೂ ISTE ಇದರ ಸಹಯೋಗದೊಂದಿಗೆ ಕಾರ್ಯಾಗಾರ ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಪ್ರಸನ್ನಕುಮಾರ್ ಸಿ ,ಪ್ರೊ.ಸಂದೀಪ ಪ್ರಭು ಹಾಗೂ ಪ್ರೊ.ಪವಿತ್ರ ಎಸ್ ಜಿ ಭಾಗವಹಿಸಿದ್ದರು.
ವಿಭಾಗ ಮುಖ್ಯಸ್ಥ ಡಾ.ಪ್ರಸನ್ನಕುಮಾರ್ ಸಿ ಉಪಸ್ಥಿತರಿದ್ದರು. ಕಾರ್ಯಾಗಾರದ ಸಂಯೋಜಕಿ ಪ್ರೊ.ರೆಬೇಕ ಫೆರ್ನಾಂಡಿಸ್ ಕಾರ್ಯಾಗಾರದ ಮಾಹಿತಿ ನೀಡಿದರು. ರಕ್ಷಿತ್ ಎನ್ ಎಸ್ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಪಿ ಎನ್ ಅನ್ವಿತಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ವಿಭಾಗದ ಮೂರನೇ ಸೆಮಿಸ್ಟರ್ ನಲ್ಲಿ ವ್ಯಾಸಂಗ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಈ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.

 

Sponsors

Related Articles

Back to top button