ಕೂಟ ಮಹಾಜಗತ್ತು ಬಂಟ್ವಾಳ ಅಂಗ ಸಂಸ್ಥೆ2024-25 ನೇ ಸಾಲಿನ ಪ್ರಥಮ ಸಂಪರ್ಕ ಸಭೆ…

ಬಂಟ್ವಾಳ: ಕೂಟ ಮಹಾಜಗತ್ತು ಬಂಟ್ವಾಳ ಅಂಗ ಸಂಸ್ಥೆ2024-25 ನೇ ಸಾಲಿನ ಪ್ರಥಮ ಸಂಪರ್ಕ ಸಭೆ ಪಾಣೆ ಮಂಗಳೂರು ವಲಯ ಮಟ್ಟದಲ್ಲಿ ಜರಗಿತು.
ಬಂಟ್ವಾಳ ಅಂಗ ಸಂಸ್ಥೆ ಅಧ್ಯಕ್ಷ ರಮೇಶ್ ಹೊಳ್ಳ ಕೊರ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರಾಮಕೃಷ್ಣ ರಾವ್ ಸಂಘದ ವರದಿಯನ್ನು ಓದಿದರು. ಉಪಾಧ್ಯಕ್ಷ ಗಣಪತಿ ಸೋಮಯಾಜಿ ಸಂಘಟನೆಯ ಬಗ್ಗೆ ಮಾಹಿತಿ ನೀಡಿದರು. ಮಾಜಿ ಅಧ್ಯಕ್ಷ ಬಿ ನಾರಾಯಣ ಸೋಮಯಾ ಜಿ, ಸಂಗೀತ ವಿದ್ವಾನ್ ಡಾ ಸೋಮಶೇಖರ ಮಯ್ಯ, ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ರವಿಚಂದ್ರ ಮಯ್ಯ ಸಲಹೆ ಸೂಚನೆ ನೀಡಿದರು. ಮುಂದಿನ ತಿಂಗಳ ಸಂಪರ್ಕ ಸಭೆಯನ್ನು ಕಲ್ಲಡ್ಕದಲ್ಲಿ ನಡೆಸಲು ತೀರ್ಮಾನಿಸಲಾಯಿತು.