ಶಿವಕುಮಾರ್ ಕೌಡಿಚ್ಚಾರ್ ನಿಧನ – ಟಿ ಎಂ ಶಾಹಿದ್ ತೆಕ್ಕಿಲ್ ಸಾಂತ್ವನ…

ಸುಳ್ಯ : ಇತ್ತೀಚಿಗೆ ಅಪಘಾತದಲ್ಲಿ ನಿಧನ ಹೊಂದಿದ ಕಾಂಗ್ರೆಸ್ ಪಕ್ಷದ ಕಾರ್ಮಿಕ ಮುಖಂಡ ಶಿವಕುಮಾರ್ ಕೌಡಿಚ್ಚಾರ್ ಅವರ ಕೌಡಿಚ್ಚಾರ್ ನಿವಾಸಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಭೇಟಿ ನೀಡಿ ಅನಾರೋಗ್ಯ ಪೀಡಿತ ಪತ್ನಿ ಸಾವಿತ್ರಿ, ಪುತ್ರ ರಾಹುಲ್, ಪುತ್ರಿಯರಾದ ಸುಶ್ಮಿತಾ ಪ್ರಿಯಾಂಕ, ಸಹನಾ ಪ್ರಿಯಾಂಕ, ಸಹೋದರ ಉದಯಕುಮಾರ, ಸಹೋದರಿ ರಾಸಮ್ಮ ಮತ್ತು ಕುಟುಂಬಸ್ಥರಿಗೆ ಸಾಂತ್ವನ ತಿಳಿಸಿದರು.
ಈ ಸಂದರ್ಭದಲ್ಲಿ ನಗರ ಪಂಚಾಯತ್ ಸದಸ್ಯ ಸಿದ್ದಿಕ್ ಕೊಕೊ, ಬ್ಲಾಕ್ ಕಾರ್ಯದರ್ಶಿ ಹನೀಫ್ ಸಂಟ್ಯಾರ್ ಉಪಸ್ಥಿತರಿದ್ದರು.