ಮಂಚಿ ಹಾಲು ಉತ್ಪಾದಕರ ಸಹಕಾರಿ ಸಂಘ ನಿ. ಕುಕ್ಕಾಜೆ- ಮಹಾಸಭೆ, 20 ಶೇ ಡಿವಿಡೆಂಡ್ ಘೋಷಣೆ…

ಬಂಟ್ವಾಳ: ಮಂಚಿ ಹಾಲು ಉತ್ಪಾದಕರ ಸಹಕಾರಿ ಸಂಘ ನಿಯಮಿತ ಕುಕ್ಕಾಜೆ ಇದರ 2023 – 2024ನೇ ಸಾಲಿನ ವಾರ್ಷಿಕ ಮಹಾಸಭೆ ಆ. 20 ರಂದು ನಿಶ್ಚಲ್ ಜಿ ಶೆಟ್ಟಿ ಅಧ್ಯಕ್ಷತೆಯಲ್ಲಿ ಕುಕ್ಕಾಜೆ ಶ್ರೀ ಸಿದ್ಧಿವಿನಾಯಕ ಮಂದಿರದಲ್ಲಿ ನಡೆಯಿತು.
ಸಂಘವು ಪ್ರಸಕ್ತ ಸಾಲಿನ ಒಟ್ಟು ವ್ಯವಹಾರವು 19705345 ರೂಪಾಯಿಯಾಗಿದ್ದು 6,86,150 ರೂಪಾಯಿ ನಿವ್ವಳ ಆದಾಯ ಗಳಿಸಿರುತ್ತದೆ ಹಾಗೂ ರೈತರಿಗೆ 3 27,832 ಬೋನಸ್ ನೀಡಲಾಗಿದೆ. ಹೆಚ್ಚು ಹಾಲು ಸರಬರಾಜು ಮಾಡಿದ ಸಂಘದ ಸದಸ್ಯರಾದ ನಿಶ್ಚಲ್ ಶೆಟ್ಟಿ ಪ್ರಥಮ, ಭಾಸ್ಕರ ಮನೆವಾರ್ತೆ ದ್ವಿತೀಯ, ಶಶಿರಾಜ್ ತೃತೀಯ ಹಾಗೂ ವರ್ಷವಿಡೀ ಎರಡು ಸರದಿಗಳಲ್ಲಿ ಹಾಲು ಪೂರೈಸಿದ ಸಂಘದ ರೈತರಿಗೆ ಪ್ರೋತ್ಸಾಹಕರ ಬಹುಮಾನ ವಿತರಿಸಲಾಯಿತು. ಕಳೆದ ಹದಿನೇಳು ವರ್ಷಗಳ ಸುದೀರ್ಘ ಅವಧಿಯಲ್ಲಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮುರಳೀಧರ ಆಳ್ವರನ್ನು ಸನ್ಮಾನಿಸಲಾಯಿತು, ಪಿಯುಸಿ ವಿಜ್ಞಾನ ವಿಭಾಗದಲ್ಲಿ 96 ಶೇಕಡಾ ಅಂಕ ಗಳಿಸಿದ ಸಂಘದ ಸದಸ್ಯ ಪುಷ್ಪರಾಜ್ ಕುಕ್ಕಾಜೆ ಯವರ ಪುತ್ರಿ ಶ್ರೇಯಾ ಇವರನ್ನು ಗೌರವಿಸಲಾಯಿತು
ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕಿ ಶ್ರೀಮತಿ ಸುಭದ್ರ ರಾವ್, ಉಪವ್ಯವಸ್ಥಾಪಕರಾದ ಡಾ.ಕೇಶವ ಸುಳ್ಳಿ ರೈತರಿಗೆ ಹೈನುಗಾರಿಕೆ ಸಂಬಂಧಿತ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಂಘದ ಮಾಜಿ ಅಧ್ಯಕ್ಷರಾದ ರಾಮ್ ಕಿಶೋರ್ ಮಂಚಿ,ಮಂಚಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿ ಉಮ್ಮರ್ ಮುಂತಾದವರು ಉಪಸ್ಥಿತರಿದ್ದರು. ವಿಸ್ತರಣಾಧಿಕಾರಿ ಪ್ರಫುಲ್ಲ ಪಿ ವಿ ಲೆಕ್ಕಪತ್ರ ಮಂಡಿಸಿದರು. ಸಂಘದ ಕಾರ್ಯದರ್ಶಿ ಶಿವಶಂಕರ್ ರಾವ್ ವರದಿ ವಾಚಿಸಿದರು.
ಸಂಘದ ಉಪಾಧ್ಯಕ್ಷರಾದ ಕೇಶವ ರಾವ್ ಸ್ವಾಗತಿಸಿ, ನಿರ್ದೇಶಕರಾದ ಚಂದಪ್ಪರವರು ಧನ್ಯವಾದವಿತ್ತರು.

Sponsors

Related Articles

Back to top button