ಬಾಲಾಲಯಕ್ಕೆ ಶಿಲಾನ್ಯಾಸ ಭೂಮಿಪೂಜೆ …

ಬಂಟ್ವಾಳ : ಕಲ್ಕುಡ ಕಲ್ಲುರ್ಟಿ ದೈವಸ್ಥಾನ ಬಂಗ್ಲೆಗುಡ್ಡೆ ಪಾಣೆಮಂಗಳೂರು ಇದರ ಜೀರ್ಣೋದ್ಧಾರದ ಅಂಗವಾಗಿ ನೂತನ ಮಹಾದ್ವಾರ, ನೂತನ ದೈವಸ್ಥಾನ ಪಾಕಶಾಲೆ, ಅನ್ನಛತ್ರ, ಕಚೇರಿ ವಾಸ್ತು ಪ್ರಕಾರ ನಿರ್ಮಾಣಗೊಳ್ಳಲಿದ್ದು ಜೀರ್ಣೋದ್ಧಾರದ ಅಂಗವಾಗಿ ಬಾಲಾಲಯಕ್ಕೆ ಶಿಲಾನ್ಯಾಸ ಭೂಮಿಪೂಜೆ ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿಸಿದರು. ಪ್ರಶಾಂತ್ ನಾಯಕ್, ಡಾ. ವಿಶ್ವನಾಥ್ ನಾಯಕ್ , ತಾರಾನಾಥ, ಸಂತೋಷ್ ಮೊದಲಾದವರು ಉಪಸ್ಥಿತರಿದ್ದರು.