ಸುಳ್ಯ ರೋಟರಿ ಕ್ಲಬ್ – ಆ.15 ರಂದು ರಕ್ತದಾನ ಶಿಬಿರ…

ಸುಳ್ಯ: ರೋಟರಿ ಕ್ಲಬ್‌, ರೋಟರಿ ಸುಳ್ಯ ಸಿಟಿ ಇನ್ನರ್‌ ವ್ಹೀಲ್‌ ಕ್ಲಬ್‌, ರೋಟರಾಕ್ಟ್ ಕ್ಲಬ್‌ ಐ.ಎಂ.ಎ.ಸುಳ್ಯ, ಕರ್ನಾಟಕ ಜರ್ನಲಿಸ್ಟ್‌ ಯೂನಿಯನ್‌ ಸುಳ್ಯ ಇದರ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆ.15 ರಂದು ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್‌ ಬ್ಯಾಂಕ್‌ ಮತ್ತು ರೆಡ್‌ ಕ್ರಾಸ್‌ ಸೊಸ್ಥೆಟಿ ಇದರ ಸಹಯೋಗದೊಂದಿಗೆ ಸುಳ್ಯ ರೋಟರಿ ಸಮುದಾಯ ಭವನದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಯಲಿರುವುದು.
ಶಿಬಿರವನ್ನು ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ ಉದ್ಘಾಟಿಸಲಿದ್ದಾರೆ. ರೋಟರಿ ಕ್ಲಬ್‌ ಅಧ್ಯಕ್ಷ
ರೊ. ಪ್ರಭಾಕರನ್‌ ನಾಯರ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ ರಾಮಚಂದ್ರ ಭಟ್‌ ಕೆ, ರೊ.ಜಿತೇಂದ್ರ ಎನ್‌. ಎ ಉಪಸ್ಥಿತರಿರುತ್ತಾರೆ. ರಕ್ತದಾನ ಶಿಬಿರ ಬೆಳಗ್ಗೆ ಗಂಟೆ 9.30 ರಿಂದ ಮಧ್ಯಾಹ್ನ 1.00 ರ ತನಕ ನಡೆಯಲಿದ್ದು ಆಸಕ್ತರು ಸ್ವಯಂಪ್ರೇರಿತವಾಗಿ ಬಂದು ರಕ್ತದಾನ ಮಾಡುವಂತೆ ಸಂಘಟಕರು ತಿಳಿಸಿರುತ್ತಾರೆ

Sponsors

Related Articles

Back to top button