ಮುದಸ್ಸಿರ್ ತೆಕ್ಕಿಲ್ ಆರಿಕ್ಕಾಡಿ ನಿಧನ…

ಸುಳ್ಯ: ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಪೇರಡ್ಕದ ತೆಕ್ಕಿಲ್ ಮಹಮ್ಮದ್ ಕುಂಞ ಅವರ ಸಹೋದರಿ ಅಸ್ಮಾ ತೆಕ್ಕಿಲ್ ಹಾಗು ದಿವಂಗತ ಅಬ್ದುಲ್ ರಹಿಮಾನ್ ಆರಿಕ್ಕಾಡಿ ಅವರ ಸುಪುತ್ರ ಮುದಸ್ಸಿರ್ ತೆಕ್ಕಿಲ್ (35 ವ) ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ನಿಧನರಾದರು.
ಇವರು ತೆಕ್ಕಿಲ್ ಸೂಪರ್ ಮಾರ್ಕೆಟ್ ನ ಪಾಲುದಾರರು. ಇವರು ಪತ್ನಿ ಸುಹಾಧ ಹಾಗು ಮೂರು ಜನ ಗಂಡು ಮಕ್ಕಳು, ಸಹೋದರಿರಾದ ಶಹೀಮ ಮತ್ತು ಆಯಿಷಾ ಹಾಗು ಅಳಿಯಂದಿರು ಮತ್ತು ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.
ಇವರ ಅಗಲುವಿಕೆಗೆ ಮಂಜೇಶ್ವರದ ಶಾಸಕ A.K.M. ಅಶ್ರಫ್ ಅವರು ಸಂತಾಪ ವ್ಯಕ್ತಪಡಿಸಿರುತ್ತಾರೆ.