ಡಾ. ಯು. ಕೆ. ಮೋನು ಹಾಜಿ ಅವರಿಗೆ ಮುಸ್ಲಿಂ ಮುಖಂಡರಿಂದ ಸನ್ಮಾನ…
ಮಂಗಳೂರು: ಮಂಗಳೂರು ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ಉದ್ಯಮಿ, ಶಿಕ್ಷಣ ತಜ್ಞ ಡಾ. ಯು. ಕೆ. ಮೋನು ಹಾಜಿ ಯವರನ್ನು ಮಂಗಳೂರಿನ ಅವರ ಕಚೇರಿಯಲ್ಲಿ ಭೇಟಿಯಾದ ಮುಸ್ಲಿಂ ಮುಖಂಡರು ಅವರನ್ನು ಸನ್ಮಾನ ಮಾಡಿ ಅವರ ಸಾಧನೆ ಬಗ್ಗೆ ಮೆಚ್ಚುಗೆ ಸಲ್ಲಿಸಿದರು.
ಕೆಪಿಸಿಸಿ ಮಾಧ್ಯಮ ವಕ್ತಾರ ಹಾಗೂ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಅಭಿನಂದಿಸಿ ಮಾತನಾಡಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಪಡೆದ ಜಿಲ್ಲೆಯ ಮುಸ್ಲಿಂ ಸಮುದಾಯದ ಪ್ರಥಮ ವ್ಯಕ್ತಿ ಕಣಚೂರ್ ಮೋನು ಹಾಜಿ ಅವರ ಅವಿರತ ಶ್ರಮ, ಶ್ರದ್ದೆ, ದೂರದೃಷ್ಠಿಯಿಂದ ಇಂದು ಅವರು ಈ ಮಟ್ಟಕ್ಕೆ ಬೆಳೆದಿದ್ದಾರೆ. ಅವರು ಸಮಾಜದಲ್ಲಿ ಸಾವಿರಾರು ವೈದ್ಯರನ್ನು, ಶಿಕ್ಷಣ ತಜ್ಞರನ್ನು ನಮ್ಮ ದೇಶಕ್ಕೆ ನೀಡಿದ ಒಂದು ಮಹಾನ್ ವ್ಯಕ್ತಿಯಾಗಿದ್ದಾರೆ. ಮುಂದೆ ಅವರಿಗೆ ರಾಜ್ಯೋತ್ಸವ,ಪದ್ಮಶ್ರೀ ಪ್ರಶಸ್ತಿಗಳು ಬರಲಿ ಎಂದು ಹಾರೈಸಿದರು.
ಕೆ ಎಂ ಮುಸ್ತಫ ಹಾಜಿ ಸುಳ್ಯ ಸ್ವಾಗತಿಸಿದರು. ಸುಳ್ಯದ ನಿಯೋಗದ ಜೊತೆಗೆ ದಕ್ಷಿಣ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಶಾಹುಲ್ ಹಮೀದ್ ಕೆ. ಕೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರು, ಕಾಂಗ್ರೆಸ್ ಮುಖಂಡರು ಆದ ಎಂ. ಎಸ್. ಮಹಮ್ಮದ್ ಅಭಿನಂದಿಸಿ ಮಾತನಾಡಿದರು.
ರಾಜ್ಯ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಕೆ ಎಂ ಮುಸ್ತಾಫ ಹಾಜಿ ಸುಳ್ಯ, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಸ್ ಸಂಶುದ್ದೀನ್, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ, ಕಾಂಗ್ರೆಸ್ ಮುಖಂಡರು ಕೆಪೆಕ್ ಮಾಜಿ ನಿರ್ದೇಶಕರಾದ ಪಿ. ಎ. ಮಹಮ್ಮದ್, ನೂರುದ್ದಿನ್ ಸಾಲ್ಮರ, ಅಖಿಲ ಭಾರತ ಬ್ಯಾರಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಖಾಲಿದ್ ಉಜಿರೆ ,ಚಾರ್ಮಾಡಿ ಹಸನಬ್ಬ, ಡಿ ಐ ಅಬೂಬಕ್ಕರ್ ಕೈರಂಗಳ,ಸುಳ್ಯ ವಿಧಾನಸಭಾ ಕ್ಷೇತ್ರದ ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷರಾದ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸಿದ್ದಿಕ್ ಕೊಕ್ಕೋ, ಸಮದ್ ಸೋಂಪಾಡಿ, ಹೈದರ್ ಪರ್ತಿಪಾಡಿ, ನಝಿರ್, ಕಣಚೂರ್ ಸಮೂಹ ಸಂಸ್ಥೆಯ ಕಟ್ಟಡದ ಇಂಜಿನಿಯರ್ ಶಮೀರ್ ಗೂನಡ್ಕ, ಬಶೀರ್ ಸ್ವಪ್ನ ಸುಳ್ಯ,ಅಲ್ಲದೆ ಜಿಲ್ಲೆಯ ಹಲವು ಮುಸ್ಲಿಂ ನಾಯಕರು ಭೇಟಿಯಾಗಿ ಸನ್ಮಾನ ಮಾಡಿ ಅಭಿನಂದಿಸಿ ಶುಭ ಹಾರೈಕೆಮಾಡಿದರು.
ಸನ್ಮಾನಕ್ಕೆ ಡಾ. ಮೋನು ಹಾಜಿ ಯವರು ಧನ್ಯವಾದ ತಿಳಿಸಿ, ತನ್ನ ಕಷ್ಟದ ದಿನಗಳನ್ನು ನೆನೆಪಿಸಿ ನಡೆದು ಬಂದ ದಾರಿಯನ್ನು ವಿವರಿಸಿದರು.