ಸ್ಕೇಟರ್ ತನ್ಮಯ ಎಂ ಕೊಟ್ಟಾರಿ ಅವರಿಗೆ ಬೆಳ್ಳಿ ಮತ್ತು ಕಂಚಿನ ಪದಕ…
ಮಂಗಳೂರು:ರೋಲಿಂಗ್ ಸ್ಕೇಟಿಂಗ್ ಫೆಡರೇಶನ್ ಆಫ್ ಇಂಡಿಯಾ ಇತ್ತೀಚಿಗೆ ಪಂಜಾಬಿನ ಮೊಹಾಲಿಯಲ್ಲಿ ರಾಷ್ಟ್ರೀಯ ಮಟ್ಟದ 14 ರಿಂದ 17 ವಯೋಮಾನದ ಬಾಲಕರ ವಿಭಾಗದ ಫಸ್ಟ್ ಇಂಡಿಯ ಸ್ಟೇಟ್ ರೋಲರ್ ಗೇಮ್ 2022 ಸ್ಕೇಟಿಂಗ್ ಚಾಂಪಿಯನ್ ಶಿಪ್ ಬಾಲಕ in-line ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಹೈ ಪ್ಲೇಯರ್ಸ್ ಸ್ಕೇಟಿಂಗ್ ಕ್ಲಬ್ಬಿನ ಸ್ಕೇಟರ್ ತನ್ಮಯ ಎಂ ಕೊಟ್ಟಾರಿ ಒಂದು ಬೆಳ್ಳಿಯ ಪದಕ ಹಾಗೂ ಒಂದು ಕಂಚಿನ ಪದಕ ಪಡೆದಿರುತ್ತಾರೆ. ಇವರು ಪ್ರಸ್ತುತ ಕೆನರಾ ಹೈಸ್ಕೂಲ್ ಸಿ ಬಿ ಎಸ್ ಸಿ ಶಾಲೆ ವಿದ್ಯಾರ್ಥಿ.