ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋಳ್ತಮಜಲು – ನೂತನ ಕಟ್ಟಡ ಉದ್ಘಾಟನೆ…
ಬಂಟ್ವಾಳ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋಳ್ತಮಜಲು ಇಲ್ಲಿ ಮಳೆಹಾನಿಯ ಯೋಜನೆಯಡಿಯಲ್ಲಿ 8.30 ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮಿಸಿದ ನೂತನ ಕಟ್ಟಡವನ್ನು ಬಂಟ್ವಾಳ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಉದ್ಘಾಟಿಸಿದರು.
ತಾಲೂಕಿನ ಎಲ್ಲಾ ಶಾಲೆಗಳ ಕೊಠಡಿಗಳನ್ನು ಮಕ್ಕಳಿಗೆ ಶಿಕ್ಷಣಕ್ಕೆ ಯೋಗ್ಯವಾಗುವ ರೀತಿಯಲ್ಲಿ ದುರಸ್ತಿಗೊಳಿಸಿ ಅಗತ್ಯವಿದ್ದ ಕಡೆಗಳಲ್ಲಿ ಹೊಸ ಕಟ್ಟಡಗಳನ್ನು ಕೂಡ ನೀಡಲಾಗುವುದು ಎಂದು ಹೇಳಿದರು.
ಸರಕಾರಿ ಶಾಲೆಯ ಮಕ್ಕಳು ವಿದ್ಯೆಯೊಂದಿಗೆ ಇತರ ಕೌಶಲ್ಯಭರಿತ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.ಮಕ್ಕಳ ಪೋಷಕರು ಕೂಡ ನಿರಂತರವಾಗಿ ಶಾಲೆಯ ಅಧ್ಯಾಪಕರೊಂದಿಗೆ ಸಂಪರ್ಕದಲ್ಲಿರಬೇಕು ತಮ್ಮ ಮಕ್ಕಳ ವಿದ್ಯಾಭ್ಯಾಸದ ಗುಣಮಟ್ಟವನ್ನು ಪರೀಕ್ಷಿಸುತ್ತಿರಬೇಕು ಎಂದು ಕಿವಿಮಾತು ಹೇಳಿದರು.ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಅಭಿಷೇಕ್ ಶೆಟ್ಟಿ ,ಪಿಡಿಒ ವಿಜಯ್ ಶಂಕರ್ ಆಳ್ವ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಊರಿನ ಪ್ರಮುಖರಾದ ಶ್ಯಾಮ್ ಭಟ್ ತೋಟ, ಪಂಚಾಯತ್ ಸದಸ್ಯರುಗಳಾದ ಪುರುಷೋತ್ತಮ, ನಳಿನಿ ಸರೋಜಿನಿ, ಎಸ್ ಡಿಎಂಸಿ ಅಧ್ಯಕ್ಷರಾದ ವೆಂಕಪ್ಪ ಇವರುಗಳು ವೇದಿಕೆಯಲ್ಲಿದ್ದರು.
ಪ್ರಮುಖರಾದ ಚಂದ್ರಶೇಖರ್ ಟೈಲರ್ ಮಹಾಬಲ ಆಳ್ವ ಮೋನಪ್ಪ ದೇವಸ್ಯ ಶೇಖರ್ ಜಿ ಕೊಟ್ಟಾರಿ ನಾರಾಯಣ ಪೂಜಾರಿ ಸುಂದರ ಶೆಟ್ಟಿ, ಐತಪ್ಪ ಪೂಜಾರಿ, ರಾಮಣ್ಣ ಶೆಟ್ಟಿ ,ರವಿ ಬಲ್ಕಟ್ಟ, ನಾರಾಯಣ ರಾವ್ ನೆಟ್ಲ, ವಿಶ್ವನಾಥ ಮುರಬೈಲು,ಪಂ ಸದಸ್ಯರಾದ ಎಲಿಯಾಸ್, ಜಯಂತ್ ಗೌಡ ಕರಿಂಗಾನ, ವೀರಕಂಬ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಪೂಜಾರಿ,ಶಾಲಾ ಮುಖ್ಯೋಪಾಧ್ಯಾಯರಾದ ಸುಮಾ ಇವರು ಪ್ರಸ್ತಾವನೆಗೈದು ,ಸಹ ಶಿಕ್ಷಕಿ ದೇವಕಿ ಸ್ವಾಗತಿಸಿದರು.ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು .