ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್ -ಸಂಧ್ಯಾ ರಾಣಿ ದಂಪತಿಗಳಿಗೆ “ಗಡಿನಾಡ ಆದರ್ಶ ಕನ್ನಡ ದಂಪತಿಗಳು” ಗೌರವ ಪ್ರಶಸ್ತಿ ಎಡನೀರು ಶ್ರೀ ಗಳಿಂದ ಪ್ರದಾನ…
ಕಾಸರಗೋಡು : ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನ “ಚುಟುಕು ಯುಗಾಚಾರ್ಯ ಎಮ್. ಜಿ. ಆರ್ ಅರಸ್ “ವೇದಿಕೆಯಲ್ಲಿ ನಾಡೋಜ ಡಾ. ಕೃಷ್ಣ ಪ್ರಸಾದ್ ಸರ್ವಾಧ್ಯಕ್ಷತೆಯಲ್ಲಿ ನಡೆದ “ಕಾಸರಗೋಡು -ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ 2026 ಕಾರ್ಯಕ್ರಮ ದಲ್ಲಿ ಡಾ. ಕೊಲಚಪ್ಪೆ ಗೋವಿಂದ ಭಟ್ ಅಧ್ಯಕ್ಷರಾಗಿರುವ ದಕ್ಷಿಣ ಕನ್ನಡ ಪರಿಷತ್ತು ಜಿಲ್ಲಾ ಘಟಕದ ವತಿಯಿಂದ ಕೇರಳ ರಾಜ್ಯ -ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಸ್ಥಾಪಕರಾದ ಡಾ. ವಾಮನ್ ರಾವ್ -ಸಂಧ್ಯಾ ರಾಣಿ ಯವರೀಗೆ “ಗಡಿನಾಡ ಆದರ್ಶ ಕನ್ನಡ ದಂಪತಿಗಳು” ಗೌರವ ಪ್ರಶಸ್ತಿ ಸನ್ಮಾನ ದ. ಕ. ಜಿಲ್ಲಾ ಘಟಕದ ವತಿಯಿಂದ ನಡೆಯಿತು.
ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಇದೀಗ ಕರ್ನಾಟಕದ ದ. ಕ ಜಿಲ್ಲೆ, ಕೊಡಗು ಜಿಲ್ಲೆ, ಕಾಸರಗೋಡು ಜಿಲ್ಲೆ, ಉಡುಪಿ ಜಿಲ್ಲೆ, ಕೋಲಾರ,ಬೆಂಗಳೂರು, ಗದಗ, ಚಿತ್ರದುರ್ಗ, ಹಾಸನ, ಕೊಪ್ಪಳ, ಬಾಗಲಕೋಟೆ, ವಿಜಯಪುರ, ಮುದ್ದೇಬಿಹಾಳ ತಾಲೂಕು ಮುಂತಾದ 15ಜಿಲ್ಲೆಗಳಲ್ಲಿ ವ್ಯಾಪಿಸಿ ಕನ್ನಡ ಕೈಂಕರ್ಯ ವನ್ನು ಉತ್ಸಾಹದಿಂದ ಮಾಡುತ್ತಿದೆ. ವೇದಿಕೆಯಲ್ಲಿ ಗದಗ ಜಿಲ್ಲೆಯ ಶ್ರೀ ಶ್ರೀ ರಮೇಶ ಮಹಾಸ್ವಾಮಿಗಳು, ನಾಡೋಜ, ಡಾ. ಕೃಷ್ಣ ಪ್ರಸಾದ್, ಡಾ ಬಾಲಕೃಷ್ಣ ಎಸ್ ಮದ್ದೋಡಿ, ಶ್ರೀ ಪ್ರದೀಪ್ ಕುಮಾರ್ ಕಲ್ಕೂರ, ಪ್ರದೀಪ್ ಬೇಕಲ್, ಡಾ ಕೆ. ಏನ್ ವೆಂಕಟ್ರಮಣ ಹೊಳ್ಳ, ಕ. ರ. ವೇ. ರಾಜ್ಯ ಸಂಚಾಲಕ ನಂ. ವಿಜಯಕುಮಾರ್, ವಿಶಾಲಾಕ್ಷ ಪುತ್ರಕಳ, ವಿರಾಜ್ ಅಡೂರ್, ಜಯಾನಂದ ಪೆರಾಜೆ, ಡಾ. ಶಾಂತ ಪುತ್ತೂರು, ಡಾ. ಸುರೇಶ್ ನೆಗಳಗುಳಿ, ರಾಜೇಶ್ ಕೋಟೆಕಣಿ ಮುಂತಾದವರಿದ್ದರು.




