ಕ್ಷೇತ್ರ ನಂದಾವರ ವರ್ಷಾವಧಿ ಜಾತ್ರಾ ಮಹೋತ್ಸವ -ನಾಲ್ಕೈ ತಾಯ ದೈವದ ನೇಮೋತ್ಸವ…

ಬಂಟ್ವಾಳ: ಶ್ರೀ ಕ್ಷೇತ್ರ ನಂದಾವರ ವರ್ಷಾವಧಿ ಜಾತ್ರಾ ಮಹೋತ್ಸವದ ನಿಮಿತ್ತ ಫೆ.9 ರಂದು ಶ್ರೀ ನಾಲ್ಕೈ ತಾಯ ದೈವದ ನೇಮೋತ್ಸವ ಜರಗಿತು.
ಭೂತಾರಾದನೆಯಲ್ಲಿ ಸಾವಿರದ ಒಂದು ಹಾಳೆಯ ಬೃಹದಾಕಾರದ ಅಣಿ ಈ ದೈವದ ವಿಶೇಷವಾಗಿರುತ್ತದೆ. ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅರವಿಂದ ಭಟ್ ಪದ್ಯಾಣ, ಪಾಲೆ ಮಂಟಪ ಸಂಸಾರ ಗಡಿ ಪ್ರಧಾನರಾದ ಉಗ್ಗ ಶೆಟ್ಟಿ ಯಾನೆ ಗಣೇಶ್ ನಾಯಕ್, ಶಿವರಾಮ ಭಂಡಾರಿ ಬಿಜೆಂದಾರ್ ಗುತ್ತು, ಯಶೋಧರ ರೈ ಮಾಡದಾರು ಗುತ್ತು, ಜಯರಾಮ ಶೆಟ್ಟಿ ನಗ್ರಿ ಗುತ್ತು, ಪ್ರಮುಖರಾದ ರಾಮಪ್ರಸಾದ್ ಪೂಂಜ, ಉದಯ ಭಟ್, ಪ್ರಕಾಶ್ ಮರಾಠೆ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಗಣೇಶ್ ನಾಯಕ್, ಅರುಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
