ಸುಳ್ಯ ಶಾಸಕ ಎಸ್.ಅಂಗಾರ ಆಸ್ಪತ್ರೆಗೆ ದಾಖಲು…

ಕಡಬ: ಅಧಿಕಾಗಳ ಸಭೆ ನಡೆಸುತ್ತಿರುವ ವೇಳೆ ಹಠಾತ್ ಅಸ್ವಸ್ಥಗೊಂಡ ಸುಳ್ಯ ಶಾಸಕ ಎಸ್.ಅಂಗಾರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಾಸಕರು ಕಡಬದಲ್ಲಿಂದು ಬೆಳಗ್ಗೆ ಪಡಿತರ ವ್ಯವಸ್ಥೆಯ ಕುರಿತು ಸಹಕಾರಿ ಸಂಘಗಳ ಮುಖ್ಯಸ್ಥರ ಸಭೆ ನಡೆಸುತ್ತಿದ್ದರು. ಈ ವೇಳೆ ಅವರಿಗೆ ದಿಢೀರ್ ರಕ್ತದೊತ್ತಡ ಕಡಿಮೆಯಾಗಿದೆ. ತಕ್ಷಣವೇ 108 ಆಂಬ್ಯುಲೆನ್ಸ್ ಮೂಲಕ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.