ಆಲೆಟ್ಟಿ ಯಲ್ಲಿ “ಆರೋಗ್ಯ ಸೋಮವಾರ” ಆರೋಗ್ಯ ಮಾಹಿತಿ ಕಾರ್ಯಕ್ರಮ…

ಸುಳ್ಯ: ಆಲೆಟ್ಟಿ ಗ್ರಾಮದ ಮೊರಂಗಲ್ಲು ಕಾಲನಿಯಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಮತ್ತು ಅತಿಸಾರಭೇದಿ ನಿಯಂತ್ರಣ ಮತ್ತು ತಂಬಾಕಿನ ದುಷ್ಪರಿಣಾಮ ಗಳ ಕುರಿತು ತಾಲೂಕಿನ ವಿನೂತನ ಕಾರ್ಯಕ್ರಮ ಆರೋಗ್ಯ ಸೋಮವಾರ ಮಾಹಿತಿ ಕಾರ್ಯಕ್ರಮ ದಲ್ಲಿ ಆರೋಗ್ಯ ಮಾಹಿತಿ ಯನ್ನು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಪ್ರಮೀಳಾ ಅವರು ಆ.1 ರಂದು ನೀಡಿದರು.
ಕಾರ್ಯಕ್ರಮವನ್ನು ಮಾಜಿ ಪಂಚಾಯತ್ ಸದಸ್ಯರಾದ ಶ್ರೀಮತಿ ಸುಂದರಿ ಮೊರಂಗಲ್ಲು ಉದ್ಘಾಟಿಸಿದರು. ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಶ್ರೀಮತಿ ಯಶಸ್ವಿನಿ ಸ್ವಾಗತಿಸಿ, ಆಶಾ ಕಾರ್ಯಕರ್ತೆ ಶ್ರೀಮತಿ ಉಷಾ ಕಿರಣ ವಂದಿಸಿದರು. ಆಲೆಟ್ಟಿ ಅಂಗನವಾಡಿ ಕಾರ್ಯಕರ್ತೆ ಮಮತಾ ಸಹಕರಿಸಿದರು.ಕಾರ್ಯಕ್ರಮದಲ್ಲಿ ಎದೆಹಾಲಿನ ಮಹತ್ವ, ಅತಿಸಾರಭೇದಿ ನಿಯಂತ್ರಣ, ತಂಬಾಕು ಸೇವನೆ ಯಿಂದ ಕಂಡು ಬರುವ ತೊಂದರೆಗಳ ಬಗ್ಗೆ ಮಾಹಿತಿ ನೀಡಲಾಯಿತು.