ಸಜೀಪನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ – ರಾಘವೇಶ್ವರ ಸ್ವಾಮೀಜಿಗಳಿಗೆ ಆಮಂತ್ರಣ…
ಬಂಟ್ವಾಳ: ಸಜೀಪನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರವನ್ನು ಶ್ರೀಮದ್ ರಾಘವೇಶ್ವರ ಭಾರತಿ ಮಹಾಸ್ವಾಮೀಜಿ ಶ್ರೀ ಸಂಸ್ಥಾನಗೋಕರ್ಣ ರಾಮಚಂದ್ರಾಪುರ ಮಠ ನೀಡಿ ಆಮಂತ್ರಿಸಲಾಯಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುoಜ ವೆoಕಟೇಶ್ವರ ಭಟ್, ಸಜೀಪ ಮಾಗಣೆಯ ತoತ್ರಿ ಎಂ ಸುಬ್ರಹ್ಮಣ್ಯ ಭಟ್, ಪದಾಧಿಕಾರಿಗಳಾದ ಪ್ರವೀಣ್ ಆಳ್ವ, ಪ್ರವೀಣ್ ಭಂಡಾರಿ, ನಿತಿನ್ ಅರಸ, ರಾಮ ಬರೆ ಮೊದಲಾದವರು ಜೊತೆಗಿದ್ದರು.