ಮಹೇಶ್ ಪ್ರಸನ್ನ ಅವರಿಗೆ ಡಾಕ್ಟರೇಟ್ ಪದವಿ….

ಪುತ್ತೂರು: ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥ ಪ್ರೊ. ಮಹೇಶ್ ಪ್ರಸನ್ನ ಅವರು ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ.
ಇಂಪ್ಲಿಮೆಂಟೇಶನ್ ಎಂಡ್ ಇವಾಲ್ಯುವೇಶನ್ ಆಫ್ ಫೇಸ್ ರೆಕಗ್ನಿಶನ್ ಅಲ್‍ಗಾರಿದಮ್ ಯೂಸಿಂಗ್ ಫಜ್ಜಿ ಲಾಜಿಕ್ ಕಂಟ್ರೋಲ್ ಎನ್ನುವ ವಿಷಯದ ಬಗ್ಗೆ ಮಾಡಿರುವ ಸಂಶೋಧನೆಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ಪಿಎಚ್‍ಡಿ ಪದವಿಯನ್ನು ನೀಡಿದೆ ಎಂದು ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ ತಿಳಿಸಿದ್ದಾರೆ.
ಡಾ.ಮಹೇಶ್‍ಪ್ರಸನ್ನ ಅವರ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಅವರನ್ನು ಅಭಿನಂದಿಸಿದ್ದಾರೆ.