ಮದರಸ ಶೈಕ್ಷಣಿಕ ವರ್ಷ ಪ್ರಾರಂಭೋತ್ಸವ ಫತಃಹೇ ಮುಬಾರಕ್ – 2024 ..

ಸುಳ್ಯ: ರಂಜಾನ್ ತಿಂಗಳ ಸುಧೀರ್ಘ ವಾರ್ಷಿಕ ರಜೆಯ ನಂತರ ಇಂದು ಏಕ ಕಾಲದಲ್ಲಿ ಮದರಸ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಗಾಂಧಿನಗರ ಮುನವ್ವಿರುಲ್ ಇಸ್ಲಾಂ ಮದರಸ ವಠಾರದಲ್ಲಿ ಜರಗಿತು.
ಅಧ್ಯಕ್ಷತೆಯನ್ನು ಗಾಂಧಿನಗರ ಜುಮ್ಮಾ ಮಸ್ಜಿದ್ ಅಧ್ಯಕ್ಷ ಕೆ. ಎಂ. ಮುಸ್ತಫ ವಹಿಸಿದ್ದರು.
ಖತೀಬರಾದ ಅಲ್ ಹಾಜ್ ಅಶ್ರಫ್ ಖಾಮಿಲ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿ, ಚೊಚ್ಚಲ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಅಕ್ಷರಾರoಭ ನಡೆಸಿಕೊಟ್ಟರು.
ಸದರ್ ಮುಅಲ್ಲಿo ಸಿರಾಜ್ ಸಖಾಫಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು
ವೇದಿಕೆಯಲ್ಲಿ ಮದರಸ ಉಸ್ತುವಾರಿ ನಿರ್ದೇಶಕ ಕೆ. ಬಿ. ಅಬ್ದುಲ್ ಮಜೀದ್, ಕಮಿಟಿ ಖಜಾಂಚಿ ಮುಹಿಯದ್ದೀನ್ ಫ್ಯಾನ್ಸಿ ಉಪಸ್ಥಿತರಿದ್ದರು. ಸಹಾಯಕ ಸದರ್ ನಿಸಾರ್ ಸಖಾಫಿ ಮುಡೂರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.