ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ವಿಧಿವಶ…..

ಬೆಂಗಳೂರು: ಉದ್ಯಮಿ, ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ(68) ರಾತ್ರಿ ಸುಮಾರು 1.55 ಕ್ಕೆ ವಿಧಿವಶರಾಗಿದ್ದಾರೆ.
ಪುತ್ತೂರಿನ ಕೆಯ್ಯೂರು ನಿವಾಸಿಯಾಗಿರುವ ಮುತ್ತಪ್ಪ ರೈಯವರು ರಾಜ್ಯದೆಲ್ಲೆಡೆ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಪುತ್ತೂರಿನಲ್ಲಿ ನಡೆಯುವ ಕಂಬಳದ ನೇತೃತ್ವ ವಹಿಸಿಕೊಳ್ಳುತ್ತಿದ್ದ ಅವರು ಆಸು ಪಾಸಿನ ಜನರ ಮನ ಗೆದ್ದಿದ್ದರು. ಅವರು ಪುತ್ತೂರು ಹಾಗು ಕುಕ್ಕೆ ಸುಬ್ರಮಣ್ಯ ಕ್ಷೇತ್ರಕ್ಕೆ ಬ್ರಹ್ಮ ರಥ ಕೊಡುಗೆ ನೀಡಿದ್ದರು.
ಅವರಿಗಿದ್ದ ಕ್ಯಾನ್ಸರ್ ರೋಗ ಕಳೆದ ಕೆಲವು ತಿಂಗಳುಗಳಿಂದ ಬಿಗಡಾಯಿಸಿತ್ತು. ಅವರಿಗೆ ಬೆಂಗಳೂರು ಹಾಗು ಅಹಮದಾಬಾದಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಮುತ್ತಪ್ಪ ರೈ ಅವರಿಗೆ ಇಬ್ಬರು ಪುತ್ರರಿದ್ದಾರೆ. ಮುತ್ತಪ್ಪ ರೈ ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರ ಬಿಡದಿಯಲ್ಲಿರುವ ಅವರ ನಿವಾಸದಲ್ಲೇ ನಡೆಯಲಿದೆ ಎಂದು ತಿಳಿದು ಬಂದಿದೆ.

Sponsors

Related Articles

Back to top button