ಮಸೂದ್, ನೆಟ್ಟಾರು, ಫಾಸಿಲ್ ಕುಟುಂಬಕ್ಕೆ ಸಾಮಾಜಿಕ ನ್ಯಾಯ ಒದಗಿಸಲು ಸರಕಾರಕ್ಕೆ ಟಿ ಎಂ ಶಾಹಿದ್ ತೆಕ್ಕಿಲ್ ಮನವಿ…

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೋಮುವಾದಿಗಳ ಅಟ್ಟಹಾಸಕ್ಕೆ ಬಲಿಯಾದ ದಿವಂಗತ ಪ್ರವೀಣ್ ನೆಟ್ಟಾರ್ ಪತ್ನಿ ನೂತನ್ ಕುಮಾರಿಯವರಿಗೆ ಬಿಜೆಪಿ ಸರಕಾರ ತಾತ್ಕಾಲಿಕ ನೆಲೆಯ ಗುತ್ತಿಗೆ ಆದರದ ನೌಕರಿಯ ನೇಮಕವನ್ನು ಸಿದ್ದರಾಮಯ್ಯ ಅವರ ಸರಕಾರ ಖಾಯಂಗೊಳಿಸುವಂತೆ ಕೆಪಿಸಿಸಿ ಮುಖ್ಯ ವಾಕ್ತರ ಟಿ ಎಂ ಶಾಹಿದ್ ತೆಕ್ಕಿಲ್ ಮುಖ್ಯಮಂತ್ರಿಗಳನ್ನು ಹಾಗೂ ಉಪಮುಖ್ಯಮಂತ್ರಿಗಳನ್ನು ವಿನಂತಿಸಿದ್ದಾರೆ, ಅದೇ ರೀತಿ ಬೆಳ್ಳಾರೆ ಮಸೂದ್, ಸುರತ್ಕಲ್ ಫಾಸಿಲ್, ಜಲೀಲ್ ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರ ಮತ್ತು ಅವರ ಕುಟುಂಬದ ಸದಸ್ಯರಿಗೆ ಖಾಯಂ ಸರಕಾರಿ ಉದ್ಯೋಗ ನೀಡಿ ಸಾಮಾಜಿಕ ನ್ಯಾಯ ಒದಗಿಸಬೇಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಕೆಪಿಸಿಸಿ ಮುಖ್ಯ ವಕ್ತಾರಾ ಟಿ ಎಂ ಶಾಹಿದ್ ತೆಕ್ಕಿಲ್ ಒತ್ತಾಯಿಸಿದ್ದಾರೆ.ಕೋಮುವಾದಿಗಳ ಅಟ್ಟಹಾಸಕ್ಕೆ ಬಲಿಯಾದ ಮಸೂದ್ ಹಾಗೂ ಫಾಸಿಲ್, ಜಲೀಲ್ ಕುಟುಂಬಕ್ಕೆ ಬೊಮ್ಮಾಯಿ ಸರಕಾರ ಮಾಡಿದ ಅನ್ಯಾಯವನ್ನು ಯಾರು ಮರೆಯಲು ಅಸಾಧ್ಯ ಸೌಜನ್ಯಕ್ಕಾದರು ಸಂತಾಪ ಸೂಚಿಸಲು ಆಗದ ಬಿಜೆಪಿ ನಾಯಕರ, ಜನಪ್ರತಿನಿಧಿಗಳ, ಸರಕಾರಿ ಅಧಿಕಾರಿಗಳ, ಹಾಗೂ ಸರಕಾರದ ನಡವಳಿಕೆ ಮಾನವೀಯತೆಯನ್ನೇ ಪ್ರಶ್ನಿಸುವಂತೆ ಮಾಡಿದ್ದು ಪ್ರವೀಣ್ ನೆಟ್ಟಾರು, ಮಸೂದ್, ಫಾಸಿಲ್, ಜಲೀಲ್ ಸಹಿತ ಹಲವಾರು ಅಮಾಯಕ ಕುಟುಂಬದ ಶಾಪ ಬೊಮ್ಮಾಯಿ ಸರಕಾರಕ್ಕೆ ತಟ್ಟಿದೆ.ಮುಖ್ಯಮಂತ್ರಿ ಸುರತ್ಕಲ್ ಭೇಟಿ ನೀಡಿದರು ಸಮೀಪದ ಫಾಸಿಲ್ ಮನೆಗೆ ಭೇಟಿ ನೀಡಿಲ್ಲ, ಬಿಜೆಪಿ ನಾಯಕರು, ಸಚಿವರು, ಸಂಸತ್ ಸದಸ್ಯರು,ಮುಖ್ಯಮಂತ್ರಿಗಳಾಗಿ ಬೆಳ್ಳಾರೆ ನೆಟ್ಟಾರ್ ಮನೆಗೆ ಭೇಟಿ ನೀಡಿದಾಗ ಸಮೀಪದಲ್ಲಿ ಕೋಮುವಾದಿಗಳ ಅಟ್ಟಹಾಸಕ್ಕೆ ಸಾವೀಗೀಡಾದದ ಬಡಪಾಯಿ ಯುವಕ ಮಸೂದ್ ಮನೆಯ ಹೃದಯವಿದ್ರಾಹಕ ಘಟನೆ ಬಗ್ಗೆ ಬೇಸರ ಇರಲಿಲ್ಲ ಅವನೊಬ್ಬ ಮುಸ್ಲಿಂ ಆದುದರಿಂದ ವಿಷಾದ ಕೂಡ ಬಿಜೆಪಿ ಮುಖಂಡರಲ್ಲಿ ಸಚಿವರಲ್ಲಿ ಮುಖ್ಯಮಂತ್ರಿಗಲ್ಲಿ ಇರಲಿಲ್ಲ ಎಂದು ಮಸೂದ್ ಹಾಗೂ ಫಾಸಿಲ್ ಕುಟುಂಬವನ್ನು ಹಿಂದಿನ ಸರಕಾರ ನಡೆಸಿದ ರೀತಿಯ ಬಗ್ಗೆ ಕಿಡಿಕಾರಿದರು ಆದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಎಲ್ಲರನ್ನು ಒಂದೇ ರೀತಿಯಲ್ಲಿ ಕಂಡು ಸಾಮಾಜಿಕ ನ್ಯಾಯ ಒದಗಿಸಲಿದೆ ಎಂದು ಕೆಪಿಸಿಸಿ ಮುಖ್ಯ ವಕ್ತಾರರಾದ ಟಿ ಎಂ ಶಾಹಿದ್ ತೆಕ್ಕಿಲ್ ತಿಳಿಸಿದ್ದಾರೆ.