ಗೂನಡ್ಕ ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆಯ ಅಧೀನದಲ್ಲಿ ಅಲ್ ಬಿರ್ರ್ ಪ್ರೀ ಇಸ್ಲಾಮಿಕ್ ಸ್ಕೂಲ್ ಉದ್ಘಾಟನೆ…

ಸುಳ್ಯ: ಗೂನಡ್ಕ ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆಯ ಅಧೀನದಲ್ಲಿ ವಿನೂತನ ಶೈಲಿಯ ಅಲ್ ಬಿರ್ರ್ ಪ್ರೀ ಇಸ್ಲಾಮಿಕ್ ಸ್ಕೂಲ್ ಉದ್ಘಾಟನೆಯನ್ನು ಜೂ.6 ರಂದು ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಟಿ ಎಂ ಶಹೀದ್ ರವರು ನೆರವೇರಿಸಿದರು.
ಅಲ್ ಬಿರ್ರ್ ಕೊಠಡಿಯನ್ನು ಪೇರಡ್ಕ ಖತೀಬರಾದ ರಿಯಾಝ್ ಫೈಝಿ ಯವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ, ದುಆ ನೆರವೇರಿಸಿದರು. ಕಲ್ಲುಗುಂಡಿ ಖತೀಬರಾದ ನಈಂ ಫೈಝಿ ಯವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಅಲ್ ಬಿರ್ರ್ ಶಿಕ್ಷಣದ ಮಹತ್ವವನ್ನು ವಿವರಿಸಿದರು. ಅತಿಥಿಗಳಾಗಿ ಭಾಗವಹಿಸಿದ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಕೆ ಹಮೀದ್, ಗೂನಡ್ಕ ಖತೀಬರಾದ ಮುಹಮ್ಮದ್ ಅಲಿ ಸಖಾಫಿ, ದೇವರಕೊಲ್ಲಿ ಉಸ್ತಾದರಾದ ಜಲೀಲ್ ಸಖಾಫಿ ಮತ್ತು ಕಲ್ಲುಗುಂಡಿ ಜಮಾಅತ್ ಅಧ್ಯಕ್ಷರಾದ ಅಬ್ಬಾಸ್ ಹಾಜಿ ಹೆಚ್ ಎ ಶುಭಹಾರೈಸಿದರು. ಪೇರಡ್ಕ ಜಮಾಅತ್ ಅಧ್ಯಕ್ಷರಾದ ಎಸ್ ಆಲಿ ಹಾಜಿ, ಎಂ ಜೆ ಎಂ ಪೆರಾಜೆ ಅಧ್ಯಕ್ಷರಾದ ಶಾಹಿದ್ ಎಂ. ಐ, ಕೊಯನಾಡು ಜಮಾಅತ್ ಕಾರ್ಯದರ್ಶಿ ರಫೀಕ್ ಚೆಡಾವು, ದೇವರಕೊಲ್ಲಿ ಮಸ್ಜಿದ್ ಕಾರ್ಯದರ್ಶಿ ಮುಸ್ತಫಾ, ಸಿ ಡಬ್ಲ್ಯೂ ಎಫ್ ಕಲ್ಲುಗುಂಡಿ ಅಧ್ಯಕ್ಷರಾದ ನಿಝಾಂ, ಸಿರಾಜುಲ್ ಇಸ್ಲಾಂ ಅಸೋಸಿಯೇಷನ್ ಕಲ್ಲುಗುಂಡಿ ಅಧ್ಯಕ್ಷರಾದ ಎ ಕೆ ಇಬ್ರಾಹಿಂ, ಎಂ ಆರ್ ಡಿ ಎ ಪೇರಡ್ಕ ಅಧ್ಯಕ್ಷರಾದ ಝಕೀರ್, ಅನ್ವಾರುಲ್ ಹುದಾ ಯಂಗ್ಮೆನ್ಸ್ ಅರಂತೋಡು ಅಧ್ಯಕ್ಷರಾದ ಅಬ್ದುಲ್ ಮಜೀದ್, ಅಲ್ ಅಮೀನ್ ಚಾರಿಟೇಬಲ್ ಟ್ರಸ್ಟ್ ಪೆರಾಜೆ ಕಾರ್ಯದರ್ಶಿ ಶಿಹಾಬ್, ಪಟೇಲ್ ಟ್ರಸ್ಟಿನ ಬದ್ರುದ್ದೀನ್ ಪಟೇಲ್, ಉದ್ಯಮಿ ಆದಂ ಹಾಜಿ ಕಮ್ಮಾಡಿ, ಅಬ್ದುಲ್ ಖಾದರ್ ಹಾಜಿ ಪಾರೆ, ಸಿದ್ದೀಕ್ ಕೊಕ್ಕೋ, ತೆಕ್ಕಿಲ್ ಪ್ರತಿಷ್ಠಾನ ಅಧ್ಯಕ್ಷರಾದ ಜಾವೇದ್ ಟಿ ಎಂ, ಶಾಲಾ ಮುಖ್ಯೋಪಾಧ್ಯಾಯರಾದ ಸಂಪತ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಇರ್ಫಾನ್ ಪೇರಡ್ಕ, ಶಾಲಾ ಆಡಳಿತಮಂಡಳಿ ಗೌರವಾಧ್ಯಕ್ಷರಾದ ತಾಜ್ ಮುಹಮ್ಮದ್, ಅಧ್ಯಕ್ಷರಾದ ಉನೈಸ್ ಪೆರಾಜೆ, ಸದಸ್ಯರುಗಳಾದ ಉಮರ್ ಹಾಜಿ ಪಿ ಎ, ಹಮೀದ್ ಹಾಜಿ ಎಸ್ ಎ, ಅಬ್ದುಲ್ ಖಾದರ್ ಹಾಜಿ ಆಝಾದ್, ಅಬ್ದುಲ್ ಖಾದರ್ ಹಾಜಿ ಪಟೇಲ್, ಹಾರಿಸ್ ಗೂನಡ್ಕ ಉಪಸ್ಥಿತರಿದ್ದರು. ರೋಯಲ್ ಚಾರಿಟೇಬಲ್ ಟ್ರಸ್ಟ್ ಗೂನಡ್ಕ ವತಿಯಿಂದ ಕೊಡುಗೆಯಾಗಿ ಶಾಲೆಗೆ ಅಗತ್ಯವಿರುವ ನೀರಿನ ಫಿಲ್ಟರನ್ನು ಅಧ್ಯಕ್ಷರಾದ ಸಾಜಿದ್ ಐ ಜಿ ಮತ್ತು ಸಿರಾಜುದ್ದೀನ್ ರವರು ಹಸ್ತಾಂತರಿಸಿದರು. ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ 150 ಕುರ್ಚಿಗಳನ್ನು ಕೊಡುಗೆಯಾಗಿ ನೀಡಿದರು. ಪಟೇಲ್ ಟ್ರಸ್ಟ್ ವತಿಯಿಂದ ಶಾಲೆಗೆ ಅಗತ್ಯವಿರುವ ಎಲ್ಲಾ ಫ್ಯಾನ್ ಗಳನ್ನು ನೀಡುವುದಾಗಿ ತಿಳಿಸಿದರು. ತೆಕ್ಕಿಲ್ ಪ್ರತಿಷ್ಠಾನ ಕಾರ್ಯದರ್ಶಿ ಅಶ್ರಫ್ ಗುಂಡಿ ರವರು ಸ್ವಾಗತಿಸಿ, ಆಡಳಿತ ಮಂಡಳಿ ಸದಸ್ಯರಾದ ಆಸಿಫ್ ಪನ್ನೆ ವಂದಿಸಿದರು. ಸ್ವಾದಿಕ್ ರವರು ಕಾರ್ಯಕ್ರಮ ನಿರೂಪಿಸಿದರು.

Sponsors

Related Articles

Back to top button