ಹಿರಿಯರ ಸೇವಾ ಪ್ರತಿಷ್ಠಾನದ ಕಾರ್ಯಕ್ರಮ ಮಾದರಿ : ಸೀತಾರಾಮ ಸಾಲೆತ್ತೂರು…

ಬಂಟ್ವಾಳ: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ರಿ. ಮೆಲ್ಕಾರ್ ಬಂಟ್ವಾಳ ಕೇಂದ್ರ ಸಮಿತಿಯ ಸಭೆಯು ಪುತ್ತೂರು ಕಲ್ಲೆಗ ಭಾರತ ಸಭಾಭವನದಲ್ಲಿ ಜರಗಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಡಿಸೆಂಬರ್ ನಲ್ಲಿ ಜರಗುವ ತೃತೀಯ ವಾರ್ಷಿಕೋತ್ಸವ, ತಾಲೂಕು ಘಟಕಗಳ ಪುನಶ್ಚೇತನ, ತಾಲೂಕು ಘಟಕಗಳಿಂದ ಸೇವಾ ಕಾರ್ಯಗಳ ಅರ್ಪಣೆ ಬಗ್ಗೆ ವಿವರವಾದ ಮಾಹಿತಿ ನೀಡಿದರು.
ಪ್ರಗತಿಪರ ಕೃಷಿಕ ಸೀತಾರಾಮ ಸಾಲೆತ್ತೂರು ದೀಪ ಬೆಳಗಿಸಿ ಸಭೆಯನ್ನು ಉದ್ಘಾಟಿಸಿ ಪ್ರತಿಷ್ಠಾನದ ಸೇವಾ ಕಾರ್ಯಗಳು ಉತ್ತಮವಾಗಿ ಮೂಡಿ ಎಲ್ಲರಿಗೂ ಮಾದರಿಯಾಗಲಿ ಎಂದು ಹಾರೈಸಿದರು.
ಪುತ್ತೂರಿನ ಚಂಚಲಾಕ್ಷಿ ಮತ್ತು ಪದ್ಮನಾಭ ಪ್ರತಿಷ್ಠಾನದ ಸದಸ್ಯರಿಗೆ ಭಗವದ್ಗೀತೆ ಪುಸ್ತಕಗಳನ್ನು ವಿತರಿಸಿದರು.
ಪಾವಂಜೆ ನಾಗವ್ರಜ ಕ್ಷೇತ್ರದಿಂದ ನಡೆಯಲಿರುವ ವಿಷ್ಣು ಸಹಸ್ರನಾಮ ಪಾರಾಯಣ ಅಭಿಯಾನದ ಬಗ್ಗೆ ಮಾಹಿತಿ ನೀಡಲಾಯಿತು. ಕಾರ್ಯಕ್ರಮದ ಆತಿಥ್ಯವನ್ನು ಅನಾರು ಬಾಲಕೃಷ್ಣರಾವ್ ಮತ್ತು ಪಡುಮಲೆ ಚಂದ್ರಶೇಖರ್ ಆಳ್ವ ವಹಿಸಿದ್ದರು. ಕಲ್ಲೇಗ ಸಂಜೀವ ನಾಯಕ್ ಸಹಕರಿಸಿದರು.
ಪ್ರತಿಷ್ಠಾನದ ಪದಾಧಿಕಾರಿಗಳಾದ ಯಂ ಜಯರಾಮ ಭಂಡಾರಿ ಧರ್ಮಸ್ಥಳ, ಲೋಕೇಶ್ ಹೆಗ್ಡೆ ಪುತ್ತೂರು,ಕೃಷ್ಣ ಶರ್ಮ ಅನಾರು, ಮಹಿಳಾ ಘಟಕದ ಅಧ್ಯಕ್ಷ ವತ್ಸಲಾ ರಾಜ್ನಿ,,ಶಂಕರಿ ಶರ್ಮ,ಭವಾನಿ ಶಂಕರ ಶೆಟ್ಟಿ ಪುತ್ತೂರು, ಉದಯಶಂಕರ ರೈ ಪುಣಚ, ಅನಾರು ಬಾಲಕೃಷ್ಣ ರಾವ್, ರಾಮಕೃಷ್ಣ ನಾಯಕ್ ಕೋಕಳ, ಗಣೇಶ ಆಚಾರ್ಯ ಜೆಪ್ಪು,ಶಿವಕುಮಾರ್ ಮಂಗಳೂರು ಸೀತಾರಾಮ ಶೆಟ್ಟಿ ಉಜಿರೆ ವಸಂತ ಸುವರ್ಣ ಬೆಳ್ತಂಗಡಿ, ಮಹಾಬಲ ರೈ ಒಳತ್ತಡ್ಕ,ರಾಜಮಣಿ ರಾಮಕುಂಜ ಭಾಗವಹಿಸಿದ್ದರು.
ಮಂಗಳೂರು ಘಟಕದ ಭರತ್ ಶೆಟ್ಟಿ ಪ್ರಾರ್ಥಿಸಿದರು. ಸಹ ಸಂಚಾಲಕ ಭಾಸ್ಕರ್ ಬಾರ್ಯ ಸ್ವಾಗತಿಸಿ ಪುತ್ತೂರು ಘಟಕದ ಗೌರವಾಧ್ಯಕ್ಷ ಪದ್ಮಯ್ಯ ಯಚ್ ವಂದಿಸಿದರು.
ಟ್ರಸ್ಟಿ ಜಯರಾಮ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.