ಸುದ್ದಿ

ಕೊಡಗು ಸುಳ್ಯ ಭಾಗದಲ್ಲಿಭೂಕಂಪ – ಸರಕಾರ ಗಂಭೀರವಾಗಿ ಪರಿಗಣಿಸಲು ಕೆಪಿಸಿಸಿ ಕಾರ್ಯದರ್ಶಿ ಟಿ ಎಂ ಶಾಹೀದ್ ತೆಕ್ಕಿಲ್ ಆಗ್ರಹ…

ಸುಳ್ಯ: ಕೊಡಗಿನ ಮತ್ತು ಸುಳ್ಯದ ಆಸುಪಾಸಿನಲ್ಲಿ ಇರುವ ಹಲವು ಗ್ರಾಮಗಳಲ್ಲಿ ಕಳೆದ ಐದು ದಿನ ಐದು ಭೂಕಂಪನದ ಅನುಭವ ಆಗಿದ್ದು ಸರಕಾರ ತಕ್ಷಣವೇ ಭೂಕಂಪ ಪರಿಣಿತರನ್ನು ಹಾಗೂ ವಿಜ್ಞಾನಿಗಳನ್ನು ಸ್ಥಳಕ್ಕೆ ಕಳುಹಿಸಿ ಅತ್ಯಂತ ಗಂಭೀರವಾಗಿ ಪರಿಗಣಿಸುವಂತೆ ಮತ್ತು ಭಯ ಭೀತರಾಗಿರುವ ಜನರಿಗೆ ವಿಶ್ವಾಸ ಮೂಡಿಸುವಂತೆ ಸಂಕಷ್ಟಕ್ಕೀಡಾದವರಿಗೆ ತುರ್ತು ಧನ ಸಹಾಯ ನೀಡುವಂತೆ ಕೆಪಿಸಿಸಿ ಕಾರ್ಯದರ್ಶಿ ಟಿ ಎಂ ಶಾಹೀದ್ ತೆಕ್ಕಿಲ್ ಆಗ್ರಹಿಸಿದ್ದಾರೆ.

ಕೊಡಗಿನ ಕೆಲವು ಭಾಗದಲ್ಲಿ ಕಳೆದ ಐದು ದಿನದಲ್ಲಿ ಐದು ಬಾರಿ ಭೂಕಂಪನದ ಅನುಭವವಾಗಿದ್ದು, ಸುಳ್ಯ ಪರಿಸರದಲ್ಲಿ ಕಳೆದ ಐದು ದಿನದಲ್ಲಿ ನಾಲ್ಕು ಬಾರಿ ಭೂಕಂಪನ ಅನುಭವವಾಗಿದೆ. ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ಅಬೂಸಾಲಿ ಗೂನಡ್ಕ , ಮಾಜಿ ಸದಸ್ಯ ನಾಗೇಶ್ ಮನೆ ಸಹಿತ ಸಂಪಾಜೆ ಹಾಗೂ ಪರಿಸರ ಗ್ರಾಮಗಳ ಅನೇಕ ಮನೆಗಳು ಹಾನಿಗೀಡಾಗಿದೆ. ಸರಕಾರ ತಕ್ಷಣವೇ ಹಾನಿಗೀಡಾದ ಮನೆಗಳಿಗೆ ಕನಿಷ್ಠ ಒಂದು ಲಕ್ಷ ರೂಪಾಯಿಯನ್ನು ತುರ್ತಾಗಿ ಪರಿಹಾರ ನೀಡುವಂತೆ ಅವರು ವಿನಂತಿಸಿದ್ದಾರೆ.
ಕೊಡಗುಹಾಗೂ ಸುಳ್ಯದ ಭಾಗದಲ್ಲಿ ಕಳೆದ ಹಲವು ವರ್ಷಗಳಿಂದ ನಡೆದಿರುವ ಭೂಕುಸಿತ ಹಾಗೂ ಕಳೆದ ಕೆಲವು ದಿನಗಳಲ್ಲಿ ನಡೆಯುತ್ತಿರುವ ಭೂಕಂಪನದಿಂದ ಜನ ಭಯಬೀತರಾಗಿದ್ದು, ಸರಕಾರ ತಕ್ಷಣವೆ ಈ ಭಾಗದ ಜನರಲ್ಲಿ ವಿಶ್ವಾಸ ಹಾಗೂ ಧೈರ್ಯ ತುಂಬುವ ಕೆಲಸವನ್ನು ಮಾಡುವಂತೆ ಅಗತ್ಯವಿದ್ದಲ್ಲಿ ಹಾನಿಗೊಳಗಾದವರ ವಾಸ್ತವ್ಯಕ್ಕೆ ಬದಲಿ ಸ್ಥಳಗಳನ್ನು ಒದಗಿಸುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಕಂದಾಯ ಸಚಿವರಾದ ಅರ್ ಅಶೋಕ್ ರವರಿಗೆ ಅವರು ಮನವಿ ಮಾಡಿದ್ದಾರೆ.
ವಿಪತ್ತು ನಿರ್ವಹಣಾ ತಂಡವನ್ನು ಈ ಭಾಗದಲ್ಲಿ ನೇಮಿಸಿ ಕಂದಾಯ ಇಲಾಖೆಯ ಉನ್ನತ ಅಧಿಕಾರಿಗಳನ್ನು , ಭೂವಿಜ್ಞಾನಿಗಳ, ವೈಜ್ಞಾನಿಕ ಮತ್ತು ತಂತ್ರಜ್ಞಾನದ ಉನ್ನತ ತಂಡವನ್ನು ಸ್ಥಳ ಪರಿಶೀಲನೆಗೆ ಕಳುಹಿಸುವಂತೆ ಸರಕಾರವನ್ನು ಕೆಪಿಸಿಸಿ ಕಾರ್ಯದರ್ಶಿ ಟಿ ಎಂ ಶಾಹೀದ್ ತೆಕ್ಕಿಲ್ ಮನವಿ ಮಾಡಿದ್ದಾರೆ.

Advertisement

Related Articles

Back to top button