ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಇಂಡಿಯನ್ ಸೆಕ್ಯೂರಿಟಿ ಮಾರ್ಕೆಟ್ ಬಗ್ಗೆ 2 ದಿನಗಳ ತರಬೇತಿ…

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಎಂಬಿಎ ವಿಭಾಗ, ವಿವೇಕಾನಂದ ಪದವಿ ಕಾಲೇಜಿನ ಸ್ನಾತಕೋತ್ತರ ವಿಭಾಗ ಮತ್ತು ಎನ್‍ಐಎಸ್‍ಎಂ ಸೆಕ್ಯೂರಿಟೀಸ್ ಇದರ ಸಂಯುಕ್ತ ಆಶ್ರಯದಲ್ಲಿ ಇಂಡಿಯನ್ ಸೆಕ್ಯೂರಿಟಿ ಮಾರ್ಕೆಟ್ ಬಗ್ಗೆ 2 ದಿನಗಳ ತರಬೇತಿ ಮತ್ತು ಪ್ರಮಾಣೀಕರಣ ಕಾರ್ಯಾಗಾರವನ್ನು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಶ್ರೀ ರಾಮ ಸಭಾಭವನದಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂಪನ್ಮೂಲ ವ್ಯಕ್ತಿ ಎನ್‍ಐಎಸ್‍ಎಂ-ಕೊಟಕ್ ಸೆಕ್ಯೂರಿಟೀಸ್‍ನ ತರಬೇತುದಾರ ವಿನೋದ್ ತಂತ್ರಿ ಮಾತನಾಡಿ ಭಾರತೀಯ ಯುವ ಪೀಳಿಗೆಗೆ ಆರ್ಥಿಕ ಸಾಕ್ಷರತೆಯ ಅಗತ್ಯತೆಯ ಬಗ್ಗೆ ತಿಳಿಸಿದರು. ಈ ರೀತಿಯ ತರಬೇತಿಗಳು ಹಣಕಾಸಿನ ಯೋಜನೆಗಳಿಗೆ ಸಾಕಷ್ಟು ಸಹಕಾರಿಯಾಗುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಮುರಳೀಧರ ಭಟ್ ಮಾತನಾಡಿ ಪಾಕೆಟ್ ಮನಿಯನ್ನೇ ಹೂಡಿಕೆ ಮಾಡಿ ಅದರಿಂದ ಲಾಭವನ್ನು ಗಳಿಸುವುದು ಸಾಧ್ಯ . ತಮ್ಮ ತಾರುಣ್ಯದ ಅವಧಿಯಲ್ಲೇ ಉಳಿತಾಯದ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಎರಡು ದಿನಗಳ ಕಾರ್ಯಕ್ರಮವು ಒಟ್ಟು ಎಂಟು ಅವಧಿಗಳನ್ನು ಒಳಗೊಂಡಿದ್ದು, ಎಂಬಿಎ ಮತ್ತು ಎಂಕಾಂ ವಿಭಾಗದ 70 ವಿದ್ಯಾರ್ಥಿಗಳು ಬಾಗವಹಿಸುತ್ತಿದ್ದಾರೆ.
ಎಂಬಿಎ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ.ಆಶ್ಲೆ ಡಿ.ಸೋಜ ಸ್ವಾಗತಿಸಿ, ವಿವೇಕಾನಂದ ಪದವಿ ಕಾಲೇಜಿನ ಸ್ನಾತಕೋತ್ತರ ವಿಭಾಗ ಸಂಯೋಜಕಿ ಡಾ.ವಿಜಯ ಸರಸ್ವತಿ ವಂದಿಸಿದರು. ಎಂಬಿಎ ವಿದ್ಯಾರ್ಥಿನಿ ಪೊನ್ನಮ್ಮ ಕಾರ್ಯಕ್ರಮ ನಿರ್ವಹಿಸಿದರು.

Sponsors

Related Articles

Back to top button