ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ ನಿಧನ- ಸುಳ್ಯದ ಕೆಪಿಸಿಸಿ ಪದಾಧಿಕಾರಿಗಳಿಂದ ಅಂತಿಮ ನಮನ…

ಸುಳ್ಯ: ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಂಸದ, ಮಾಜಿ ಶಾಸಕ,ರಾಜ್ಯ ಕಂಡ ಅಪರೂಪದ ಸಜ್ಜನ,ಸರಳ ಪ್ರಾಮಾಣಿಕ ರಾಜಕಾರಣಿ ಆರ್ ಧ್ರುವನಾರಾಯಣ್ ರವರು ಹಠಾತ್ ನಿಧನ ಹೊಂದಿದ್ದು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ಹಾಗೂ ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಮುಸ್ತಫ, ಕೆಪಿಸಿಸಿ ಸಂಯೋಜಕ ಹೆಚ್.ಎಂ. ನಂದಕುಮಾರ್ ಸೇರಿದಂತೆ ಹಲವು ನಾಯಕರು ಸುಳ್ಯದಿಂದ ಮೈಸೂರಿಗೆ ತೆರಳಿ ವಿಜಯನಗರದಲ್ಲಿರುವ ಮೃತರ ನಿವಾಸದಲ್ಲಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹಮದ್, ಕರ್ನಾಟಕ ಸರಕಾರದ ಸಚಿವರಾದ ಸೋಮಣ್ಣ, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಸೋಮಶೇಖರ್, ತನ್ವಿರ್ ಸೇಠ್ ಮಂಜುನಾಥ್ ಬೆಂಗಳೂರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಧನಂಜಯ ಅಡ್ಪಂಗಾಯ ಅವರು ಧ್ರುವನಾರಾಯಣ್ ರವರ ಅಗಲುವಿಕೆ ನನಗೆ ಕುಟುಂಬದ ಸದಸ್ಯನನ್ನು ಕಳೆದುಕೊಂಡಷ್ಟು ನೋವು ತಂದಿದೆ. ಅವರು ನಮ್ಮೊoದಿಗೆ ತೋರಿದ ಪ್ರೀತಿ ವಿಶ್ವಾಸ ವರ್ಣಿಸಲು ಶಬ್ದಗಳೇ ಇಲ್ಲ. ರಾಜ್ಯ ಕಂಡ ಪ್ರಾಮಾಣಿಕ ಅಪರೂಪದ ರಾಜಕಾರಣಿಯ ನಷ್ಟವಾಗಿದೆ. ಈ ಅಗಲುವಿಕೆ ರಾಜ್ಯದ ರಾಜಕೀಯದಲ್ಲಿ ಒಂದು ಶೂನ್ಯವನ್ನು ಸೃಷ್ಟಿಸಿದೆ ಎಂದು ಸಂತಾಪ ವ್ಯಕ್ತಪಡಿಸಿದರು. ಅವರ ಕುಟುಂಬಕ್ಕೆ ದುಃಖ ವನ್ನು ಸಹಿಸುವ ಶಕ್ತಿಯನ್ನು ಪರಮಾತ್ಮ ಕರುಣಿಸಲಿ ಎಂದು ಅವರು ಹೇಳಿದರು.

Sponsors

Related Articles

Back to top button