ಶತಮಾನದ ಗಡಿಯಾಚೆಗಿನ ಅರಂತೋಡು ಪಟೇಲ್ ಅಹಮದ್ ಕುಂಞಿ ಹಾಜಿ ಮನೆತನದ (ತರವಾಡಿನ) ಸಮಿತಿ ರಚನೆ…

ಸುಳ್ಯ: ಅರಂತೋಡಿನ ಪಟೇಲರಾಗಿದ್ದ ದಿ. ಅಹಮದ್ ಕುಂಞಿ ಹಾಜಿ ಅವರ ಮೊಮ್ಮಗ ವ್ಯಾಪಾರಿ, ಸಮಾಜ ಸೇವಕ, ಅರಂತೋಡು ಪಾಪ್ಯುಲರ್ ಎಜುಕೇಶನ್( ರಿ) ಇದರ ಸ್ಥಾಪಕ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ, ಅನ್ವಾರುಲ್ ಹುದಾ ಯಂಗ್ ಮೆನ್ಸ್ ಇದರ ಸ್ಥಾಪಕ ಕಾರ್ಯದರ್ಶಿ,ಅರಂತೋಡು ಮಸೀದಿಯ ಅಧ್ಯಕ್ಷರಾಗಿದ್ದ ಅಹಮದ್ ಪಟೇಲ್ ಅವರು ನಿಧನ ಹೊಂದಿ 40ನೇ ದಿನದ ತಹಲೀಲ್ ದುವಾ ಕಾರ್ಯಕ್ರಮ ಜ. 21 ರಂದು ಪಟೇಲ್ ಮನೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಶತಮಾನದ ಗಡಿ ದಾಟಿದ ಅರಂತೋಡು ಪಟೇಲರಾಗಿ ಜನನುರಾಗಿದ್ದ ಕುಂಬ್ಳೆ ಅಹಮದ್ ಕುಂಞಿ ಹಾಜಿ ಪಟೇಲ್ ತರವಾಡಿನ ಕುಟುಂಬ ಸಮ್ಮಿಲನಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಪಟೇಲ್ ಕುಟುಂಬದ ಸದಸ್ಯ ಟಿ ಎಂ ಶಾಹಿದ್ ತೆಕ್ಕಿಲ್ ಅವರಿಗೆ 54ನೇ ಜನ್ಮದಿನದ ಪ್ರಯುಕ್ತ ಕುಟುಂಬದವರು ಶಾಲು ಹೊದಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಟಿ ಎಂ ಶಾಹಿದ್ ತೆಕ್ಕಿಲ್ ಮಾತನಾಡಿ ಮದ್ರಾಸ್ ರಾಜ್ಯದ ಪ್ರಾಂತವಾಗಿದ್ದ ಅವಿಭಕ್ತ ದಕ ಜಿಲ್ಲೆಯ ಕಾಸರಗೋಡು, ಕುಂಬ್ಳೆ ಪರಿಸರದಿಂದ ಬ್ರಿಟಿಷರ ಆಡಳಿತದ ಅವಧಿಯಲ್ಲಿ ಪಟೇಲರಾಗಿ ಅರಂತೋಡಿಗೆ ನೇಮಕಗೊಂಡ ನಮ್ಮ ಪೂರ್ವಜರಾದ ಹಾಜಿ ಅಹಮದ್ ಕುಂಞಿ ಪಟೇಲರು ನಾಡಿನಲ್ಲಿ ಕೋಮು ಸೌಹಾರ್ದತೆ, ಸಹಕಾರ, ದಾನ ಸೇವೆಗಳಿಗೆ ಚಾಲನೆ ಕೊಟ್ಟಿದ್ದು, ಊರಿನ ಅಭಿವೃದ್ಧಿ ಮಾಡಿದ ಬಗ್ಗೆ ಮತ್ತು ಕುಕ್ಕುಂಬಳ, ಪೆರಾಜೆ ಸಹಿತ ಅಸುಪಾಸಿನ ಗ್ರಾಮದಲ್ಲಿ ಕೃಷಿ ವ್ಯಾಪಾರ ಮಾಡಿದ್ದು, ನವ ಪೀಳಿಗೆಯವರಲ್ಲಿ ಕುಟುಂಬ ಸಂಬಂಧ ಪರಿಚಯಿಸಲು ಮತ್ತು ಅವರು ಮಾಡಿದ ಕೆಲಸ ಕಾರ್ಯ ಮುಂದುವರಿಸಲು ಉತ್ತಮ ಯೋಜನೆಗಳನ್ನು ರೂಪಿಸುವವರೇ ಶತಮಾನದ ಗಡಿ ದಾಟಿದ ಪಟೇಲ್ ತರವಾಡು ಕುಟುಂಬ ಸಮಿತಿ ಚಾಲನೆ ಮಾಡಿರುವುದನ್ನು ಸ್ವಾಗತಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಹಿರಿಯರಾದ ಅಬ್ದುಲ್ ರಹ್ಮಾನ್ ಪಟೇಲ್, ಅಬ್ದುಲ್ ಖಾದರ್ ಪಟೇಲ್, ಬದ್ರುದ್ದೀನ್ ಪಟೇಲ್, ಸೈಫುದ್ದೀನ್ ಪಟೇಲ್,ಹಭೀಬ್ ಪಟೇಲ್,ಹನೀಫ್ ಎ ಇ ಅರಂತೋಡು ,ಅಮೀರ್ ಕುಕ್ಕುಂಬಳ, ಬಶೀರ್ ಕುಕ್ಕುಂಬಳ, ಪಸಿಲು ಎ ಸಣ್ಣಮನೆ ಅರಂತೋಡು , ಮುಸ್ತಪ ಎ ಅರಂತೋಡು ಮೊದಲಾದವರು ಉಪಸ್ಥಿತರಿದ್ದರು.
ಪಟೇಲ್ ಟ್ರಸ್ಟಿನಿಂದ ಹಲವಾರು ಸಮಾಜ ಮುಖಿ ಕೆಲಸದ ಬಗ್ಗೆ ರೂಪುರೇಷೆಗಳನ್ನು ಮಾಡಲಾಯಿತು. ದೇಶ ವಿದೇಶದಲ್ಲಿರುವ ಪಟೇಲ್ ಕುಟುಂಬದ ಸುಮಾರು 10 ಸಾವಿರಕ್ಕೂ ಮಿಕ್ಕಿ ಸದಸ್ಯರಿಗಾಗಿ ಅನಿವಾಸಿ ಭಾರತೀಯ ಸಮಿತಿ, ಮಹಿಳಾ ಸಮಿತಿ ಮತ್ತು ಕೇಂದ್ರ ಸಮಿತಿ ರಚಿಸಲು ತೀರ್ಮಾನಿಸಲಾಯಿತು.

whatsapp image 2025 01 25 at 11.59.28 am

Sponsors

Related Articles

Back to top button