ಪೇರಡ್ಕ ಉರೂಸ್ – ಧಾರ್ಮಿಕ ಉಪನ್ಯಾಸ…

ಶಾಂತಿ ಸೌಹಾರ್ಧತೆಯ ಧರ್ಮವೇ ಇಸ್ಲಾಂ ಧರ್ಮ - ಇ.ಪಿ ಅಬೂಬಕ್ಕರ್ ಮುಸ್ಲಿಯಾರ್…

ಸುಳ್ಯ: ಇಸ್ಲಾಂ ಶಾಂತಿ ಸೌಹಾರ್ಧತೆಯ ಧರ್ಮವಾಗಿದ್ದು, ಪರಧರ್ಮ ಸಹಿಷ್ಣುತೆಯೊಂದಿಗೆ ಹೃದಯ ವೈಶಾಲ್ಯ ಮತ್ತು ಶಾಂತಿ ಸಹ ಬಾಳ್ವೆಯಿಂದ ಜೀವನ ನಡೆಸಲು ನಮಗೆ ಪ್ರವಾದಿಯವರು ಕಲಿಸಿ ಕೊಟ್ಟಿದ್ದಾರೆ ಆ ದಾರಿಯಲ್ಲಿ ಮುನ್ನಡೆಯ ಬೇಕೆಂದು ಖ್ಯಾತ ವಾಗ್ಮಿ ಬಹು| ಇ.ಪಿ ಅಬೂಬಕ್ಕರ್ ಮುಸ್ಲಿಯಾರ್ ಅಲ್ ಖಾಸಿಮ್ ಪತ್ತನಾಪುರಂ ಹೇಳಿದರು.
ಅವರು ಫೆ.18 ರಂದು ಪೇರಡ್ಕ ತೆಕ್ಕಿಲ್ ಮಹಮ್ಮದ್ ಹಾಜಿ ವೇದಿಕೆಯಲ್ಲಿ ನಡೆದ ಇತಿಹಾಸ ಪ್ರಸಿದ್ಧ ವಲಿಯುಲ್ಲಾಹಿ ದರ್ಗಾ ಶರೀಫ್‌ನ 2ನೇ ದಿನದ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಅಧ್ಯಕ್ಷ ಹಾಜಿ ಇಬ್ರಾಹಿಂ ಮೈಲುಕಲ್ಲು ವಹಿಸಿದ್ದರು, ಸ್ಥಳಿಯ ಖತೀಬರಾದ ಬಹು| ರಿಯಾಝ್ ಫೈಝಿ ದುವಾಃ ನೆರವೇರಿಸಿ ಮಾತನಾಡಿ ಇಲ್ಲಿ ಮಹಾನ್ ವ್ಯಕ್ತಿಗಳು ಅಂತ್ಯ ವಿಶ್ರಾಂತಿ ಗೊಂಡಿರುವುದು ನಾಡಿನ ತೇಜಸ್ಸು ಆಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಮಸೀದಿ ಗೌರವಾಧ್ಯಕ್ಷ ಟಿ.ಎಂ ಶಹೀದ್ ತೆಕ್ಕಿಲ್, ಜಮಾತ್ ಅಧ್ಯಕ್ಷ ಆಲಿ ಹಾಜಿ, ಯೂತ್ ಕಾಂಗ್ರೆಸ್ ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ, ಸುನ್ನಿ ಮಹಲ್ ಫೆಡರೇಶನ್ ಅಧ್ಯಕ್ಷ ಹಮೀದ್ ಹಾಜಿ, ಕಲ್ಲುಗುಂಡಿ ಜುಮಾ ಮಸೀದಿ ಅಧ್ಯಕ್ಷ ಹಾಜಿ ಎಚ್.ಎ ಅಬ್ಬಾಸ್ , ಪಾರ್ವಡ್ ಗ್ರೂಪ್‌ನ ಉಪಾಧ್ಯಕ್ಷ ಡಾ| ಉಮ್ಮರ್ ಬೀಜದಕಟ್ಟೆ, ಕೆ.ಎಂ ಆಶ್ರಫ್ ಕಲ್ಲುಗುಂಡಿ, ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯ ಅಧ್ಯಕ್ಷ ಅಬ್ದುಲ್ಲ ಫೈಝಿ, ಅಬ್ದುಲ್ ರಝಾಕ್ ಹಾಜಿ ಕರಾವಳಿ ಸುಳ್ಯ, ಮಹಮ್ಮದ್ ಕೆ ಆರ್ ಸಿ ಪೆರಾಜೆ, ಹಾಜಿ ಅಹಮ್ಮದ್ ಪಟೇಲ್ ಅರಂತೋಡು, ಬದ್ರುದ್ದೀನ್ ಪಟೇಲ್ ಅರಂತೋಡು, ಎಸ್ ಎಂ ಅಬ್ದುಲ್ ಮಜೀದ್ ಅರಂತೋಡು ಭಾಗವಹಿಸಿದರು. ವೇದಿಕೆಯಲ್ಲಿ ಪೇರಡ್ಕ ಮದರಸ ಅಧ್ಯಾಪಕ ಹಂಸ ಮುಸ್ಲಿಯಾರ್, ಸಹಅಧ್ಯಾಪಕ ನೂರುದ್ಧೀನ್ ಅನ್ಸಾರಿ, ಮಾಜಿ ಅಧ್ಯಕ್ಷರಾದ ಆರೀಫ್ ತೆಕ್ಕಿಲ್, ಕೋಶಾಧಿಕಾರಿ ಪಿ.ಕೆ ಉಮ್ಮರ್, ಅಬ್ಬಾಸ್ ಪಾಂಡಿ, ಅಬ್ದುಲ್ ಖಾದರ್ ಮೊಟ್ಟೆಂಗಾರ್ ಮೊದಲಾದವರು ಉಪಸ್ಥಿತರಿದ್ದರು. ಉರೂಸ್ ಸಮಿತಿಯ ಕಾರ್ಯದರ್ಶಿ ಜಿ.ಕೆ ಹಮೀದ್ ಗೂನಡ್ಕ ಸ್ವಾಗತಿಸಿ, ಅಬ್ದುಲ್ ರಝಾಕ್ ತೆಕ್ಕಿಲ್ ವಂದಿಸಿದರು.

whatsapp image 2023 02 19 at 12.05.27 pm
Sponsors

Related Articles

Back to top button