“ಮಾನವ ಸರಪಳಿ” ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ…
ಸುಳ್ಯ: SKSSF ದ ಕ ಈಸ್ಟ್ ಜಿಲ್ಲಾ ವತಿಯಿಂದ ಕುಂಬ್ರದಲ್ಲಿ ಜ. 26 ರಂದು ನಡೆಯುವ “ಮಾನವ ಸರಪಳಿ” ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಪೇರಡ್ಕ ಗೂನಡ್ಕ ಮೊಹಿಯದ್ದಿನ್ ಜುಮಾ ಮಸೀದಿಯಲ್ಲಿ ಜಮಾಅತ್ ಅದ್ಯಕ್ಷರಾದ ಟಿ ಎಂ ಶಹೀದ್ ತೆಕ್ಕಿಲ್ ಅವರನ್ನು ಕಾರ್ಯಕ್ರಮಕ್ಕೆ ಆಮಂತ್ರಿಸುವ ಮೂಲಕ ಬಿಡುಗಡೆ ಗೊಳಿಸಲಾಯಿತು.
ಖತೀಬ್ ಉಸ್ತಾದರಾದ ನಈಂ ಫೈಝಿ ಅಲ್ ಮಹ್ಬರಿ, ಜಮಾಅತ್ ಪ್ರ ಕಾರ್ಯದರ್ಶಿ ಪಿ ಕೆ ಉಮ್ಮರ್ ಗೂನಡ್ಕ ಜಿಕೆ ಹಮೀದ್ ಗೂನಡ್ಕ ಸುಳ್ಯವಲಯ SKSSF ಸಂಘಟನಾ ಕಾರ್ಯದರ್ಶಿ ಕಾದರ್ ಮೊಟ್ಟೆಂಗಾರ್ ಶಾಖೆ ಅದ್ಯಕ್ಷರಾದ ಮುನೀರ್ ದಾರಿಮಿ, ಜಮಾಅತ್ ಉಪಾದ್ಯಕ್ಷರಾದ ಟಿ ಬಿ ಹನೀಪ್ ಗೂನಡ್ಕ ಕಾರ್ಯದರ್ಶಿ ಉಸ್ಮಾನ್ ಕೋಶಾಧಿಕಾರಿ ತೆಕ್ಕಿಲ್ ಮಹಮ್ಮದ್ ಕುಂಞಿ, ಸಾದುಮಾನ್ ತೆಕ್ಕಿಲ್ ಮೊದಲಾದವರು ಇದ್ದರು.