ಸುಳ್ಯ ಅಡ್ಕಾರು ಬಳಿ ಮತ್ತೊಂದು ಅಪಘಾತ-ಎರಡು ಸಾವು,ನಾಲ್ವರು ಗಂಭೀರ…..

ಸುಳ್ಯ:ಮಾಣಿ ಮೈಸೂರು ಹೆದ್ದಾರಿಯಲ್ಲಿ ಸುಳ್ಯದ ಅಡ್ಕಾರು‌ ಬಳಿ ಕೇರಳದ ಬಸ್ಸು ಮತ್ತು ಇನೋವಾ ನಡುವೆ ಅಪಘಾತವಾಗಿದೆ. ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ನಾಲ್ವರು ಗಂಭೀರ ಗಾಯಗೊಂಡಿರುವುದಾಗಿ ತಿಳಿದುಬಂದಿದೆ.
ಕಳೆದ ವಾರವೂ ಇದೇ ಪ್ರದೇಶದಲ್ಲಿ ಅಪಘಾತವಾಗಿ‌ ನಾಲ್ವರು ಸಾವನ್ನಪ್ಪಿದ್ದರು. ಕೇರಳದ ಬಸ್ಸು ಕಾಸರಗೋಡಿನಿಂದ ಸುಳ್ಯಕ್ಕೆ, ಇನೋವಾ ಕಾರು ಸುಳ್ಯ ಕಡೆಯಿಂದ ಮಂಗಳೂರಿಗೆ ಹೋಗುತ್ತಿತ್ತು.
ಬಂಟ್ವಾಳ ತಾಲೂಕಿನ ಕೆದಿಲ ಅಬ್ದುಲ್ ಖಾದರ್ ರವರ ಪುತ್ರ ಮಜೀದ್ (32) ಕಬಕದ ಉಮ್ಮರ್ ರವರ ಪುತ್ರ ಮಹಮ್ಮದ್ ಸಾದಿಕ್ (31) ಮೃತಪಟ್ಟವರು. ಗಾಯಾಳುಗಳನ್ನು ಸುಳ್ಯ ಆಸ್ಪತ್ರೆಗೆ ಸೇರಿಸಲಾಗಿದೆ.

IMG 20191011 200038 300x161

IMG 20191011 WA0033 300x225

IMG 20191011 WA0034 225x300

IMG 20191011 200107 221x300

IMG 20191011 200038 300x161

Related Articles

Leave a Reply

Your email address will not be published. Required fields are marked *