ತುಂಬೆ: ಸೋಮಪ್ಪ ಕೋಟ್ಯಾನ್ ಅವರಿಗೆ ನುಡಿನಮನ ಕಾರ್ಯಕ್ರಮ…

ಬಂಟ್ವಾಳ: ಇತ್ತೀಚೆಗಷ್ಟೆ ನಿಧನ ಹೊಂದಿದ ಧಾರ್ಮಿಕ, ಸಾಮಾಜಿಕ, ರಾಜಕೀಯ ಮುಂದಾಳು ತಾ.ಪಂ. ಮಾಜಿ ಸದಸ್ಯ ಸೋಮಪ್ಪ ಕೋಟ್ಯಾನ್ ಅವರ ಸಾಧನೆಯನ್ನು ಗೌರವಿಸಿ, ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ತುಂಬೆ ಶ್ರೀ ಶಾರದಾ ಸೇವಾ ಪ್ರತಿಷ್ಠಾನದ ಅಶ್ರಯದಲ್ಲಿ “ನುಡಿನಮನ” ಕಾರ್ಯಕ್ರಮ ಡಿ.2ರಂದು ತುಂಬೆ ಶ್ರೀ ಶಾರದಾ ಸಭಾಭವನದಲ್ಲಿ ನಡೆಯಿತು.

ಸೋಮಪ್ಪ ಕೋಟ್ಯಾನ್ ಅವರ ಪುತ್ರರಾದ ಸಂತೋಷ್ ಕುಮಾರ್ ಹಾಗೂ ಸಂಪತ್ ಕುಮಾರ್ ಅವರು ದೀಪ ಪ್ರಜ್ವಲಿಸಿದರು. ಬಳಿಕ ಗಣ್ಯರು ಸೋಮಪ್ಪ ಕೋಟ್ಯಾನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಬಾ ಜ ಪಾ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ನುಡಿನಮನ ಸಲ್ಲಿಸಿ, ಹುಟ್ಟು ಸಾವಿನ ನಡುವಿನ ಬದುಕಿನಲ್ಲಿ ಆದರ್ಶ ಜೀವನ ನಡೆಸಿ ಸಮಾಜಮುಖಿ ಸೇವಯಲ್ಲಿ ತೊಡಗಿ, ಸದಾ ಊರಿನ ಸಮಾಜದ ಏಳಿಗೆಗೆ ಶ್ರಮಿಸಿದ ಸರಳ ಸಜ್ಜನಿಕೆಯ ವ್ಯಕ್ತಿ ಸೋಮಪ್ಪ ಕೋಟ್ಯಾನ್ ರ ಅಗಲುವಿಕೆ ಸಮಾಜಕ್ಕೆ ತುಂಬಲಾರದ ನಷ್ಟ, ಅವರ ಆದರ್ಶ ಗುಣಗಳನ್ನು ನಮ್ಮಲ್ಲಿ ಮೈಗ್ಗೂಡಿಸುವ ಅವಶ್ಯಕತೆ ಇದೆ ಎಂದು ಹೇಳಿದರು.

ಜಿ.ಪಂ. ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ನುಡಿನಮನ ಸಲ್ಲಿಸಿ, ಸೋಮಪ್ಪ ಕೋಟ್ಯಾನ್ ಪಕ್ಷ ಭೇದ ಮರೆತು ಎಲ್ಲರೊಂದಿಗೆ ಪ್ರೀತಿಯಿಂದ ಬೆರೆಯುತ್ತಿದ್ದ ವ್ಯಕ್ತಿ. ಹಲವಾರು ಸಮಸ್ಯೆಗಳನ್ನು ಅವರಲ್ಲಿ ಚರ್ಚಿಸಿದಾಗ ಪರಿಹಾರ ಸಿಗುತಿತ್ತು, . ಊರಿನ ಎಲ್ಲಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಜನರ ಪ್ರೀತಿ ವಿಶ್ವಾಸ ಗಳಿಸಿದ್ದರು ಎಂದು ತಿಳಿಸಿದರು.

ಮಂಗಳೂರು ಮಂಡಲ ಬಾ ಜ ಪಾ ಅಧ್ಯಕ್ಷ ಜಗದೀಶ ಆಳ್ವ ಕುವೆತ್ತಬೈಲು, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮೈಸೂರು ಎಲೆಕ್ಟ್ರಿಕ್ ನ ಇಂಡಸ್ಟ್ರೀಸ್ ನ ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ವಿಜಯ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಯೋಗಿಶ್ ದಾಂಬ್ಳೆ, ಉದ್ಯಮಿ ಆದಂ‌ ಉಚ್ಚಿಲ್ ತುಂಬೆ, ಜ್ಯೋತಿಷಿ ಅನಿಲ್ ಪಂಡಿತ್, ಉದ್ಯಮಿ ಲೋಕನಾಥ ಶೆಟ್ಟಿ, ನಿವೃತ್ತ ಶಿಕ್ಷಕ ಶೇಷಪ್ಪ ಮೂಲ್ಯ,ಮೇರಮಜಲು ಗ್ರಾ ಪಂ ಮಾಜಿ ಅಧ್ಯಕ್ಷೆ ಜಯಶ್ರೀ ಕರ್ಕೇರ, ಹರೀಶ್ ಕೋಟ್ಯಾನ್ ಕುದನೆ,ಸಂಜೀವ ಪೂಜಾರಿ ಮತ್ತಿತರರು ನುಡಿ ನಮನ ಸಲ್ಲಿಸಿದರು.

ಪ್ರಮುಖರಾದ ಶ್ರೀ ಶಾರದಾ ಪ್ರತಿಷ್ಠಾನದ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ,ತುಂಬೆ ಗ್ರಾ ಪಂ ಉಪಾಧ್ಯಕ್ಷ ಗಣೇಶ್ ಸಾಲಿಯಾನ್ ತುಂಬೆ, ಗಿರಿ ಪ್ರಕಾಶ ತಂತ್ರಿ, ಪ್ರಕಾಶ್ಚಂದ್ರ ರೈ ದೇವಸ್ಯ, ಎಂ.ಆರ್. ನಾಯರ್, ಪ್ರಕಾಶ್ ಶೆಟ್ಟಿ ಶ್ರೀ ಶೈಲ,ಪದ್ಮನಾಭ ಶೆಟ್ಟಿ ಪುಂಚಮೆ, ದಿನೇಶ್ ಶೆಟ್ಟಿ ಕೊಟ್ಟಿಂಜ,ಮಾಧವ ವಳವೂರು,ಜಗನ್ನಾಥ ಸಾಲ್ಯಾನ್ ತುಂಬೆ, ಸುಕೇಶ್ ಶೆಟ್ಟಿ ತೇವು, ರಾಘವ ಬಂಗೇರ ಪೇರ್ಲಬೈಲು,ನವೀನ್ ಸುರಭಿ, ದಿವಾಕರ ಪೇರ್ಲಬೈಲು, ಯೋಗೀಶ್ ಕೋಟ್ಯಾನ್, ವಿಜಯ್ ಕಜೆಕಂಡ,ಸುಶಾನ್ ಆಚಾರ್ಯ ಬೊಳ್ಳಾರಿ, ಜಲಜಾಕ್ಷಿ ಕೋಟ್ಯಾನ್, ಹೇಮಲತಾ ಜಿ. ಪೂಜಾರಿ ಮತ್ತಿತರರು ಭಾಗವಹಿಸಿದ್ದರು. ತಾರಾನಾಥ ಕೊಟ್ಟಾರಿ ತೇವು ಕಾರ್ಯಕ್ರಮ ನಿರೂಪಿಸಿದರು.

whatsapp image 2025 12 03 at 10.05.08 pm

Related Articles

Back to top button