ದ.ಕ – ಬುಧವಾರ 42 ಮಂದಿಯಲ್ಲಿ ಕೊರೊನಾ ನೆಗೆಟಿವ್, 9 ಮಂದಿ ಸೋಂಕಿತರು ಗುಣಮುಖ…

ಮಂಗಳೂರು: ಬುಧವಾರ ಸುಮಾರು 42 ಮಂದಿಯ ಪರೀಕ್ಷಾ ಮಾದರಿಗಳು ಲಭ್ಯವಾಗಿದ್ದು, ಎಲ್ಲವೂ ನೆಗೆಟಿವ್ ಆಗಿದೆ.
ಜಿಲ್ಲೆಯಲ್ಲಿ ಇದುವರೆಗೆ 12 ಮಂದಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು, ಈಗಾಗಲೇ 9 ಮಂದಿ ಗುಣಮುಖರಾಗಿದ್ದು, ಇನ್ನು ಮೂವರು ಮಾತ್ರವೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು 15 ಮಂದಿಯನ್ನು ನಿಗಾದಲ್ಲಿರಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು 22 ಮಂದಿಯ ಮಾದರಿಗಳನ್ನು ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ನಿರೀಕ್ಷಿಸಲಾಗಿದೆ.ಕಳೆದ 11 ದಿನಗಳಿಂದ ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್ ಪ್ರಕರಣಗಳು ದಾಖಲಾಗಿಲ್ಲ. ಆ ಮೂಲಕ ಜಿಲ್ಲಾಡಳಿತ ಕೈಗೊಂಡ ಮುಂಜಾಗೃತ ಕ್ರಮ ಯಶಸ್ವಿಯಾಗುತ್ತಿದೆ.

Sponsors

Related Articles

Leave a Reply

Your email address will not be published. Required fields are marked *

Back to top button