ಬಿ. ಸಿ. ರೋಡ್ ರೈತ ಉತ್ಪಾದಕರ ಕಂಪೆನಿ ಉತ್ಪಾದಕರ ಸಭೆ…

ಬಂಟ್ವಾಳ : ಕರ್ನಾಟಕ ತೆಂಗು ಸೌಹಾರ್ದ ನಿ. ಬಂಟ್ವಾಳ ಆಶ್ರಯದಲ್ಲಿ ರೈತ ಉತ್ಪಾದಕರ ಕಂಪೆನಿ ರಚನೆ ಮತ್ತು ಪದಾಧಿಕಾರಿಗಳ ಆಯ್ಕೆ ಸಭೆ ಡಿ.28ರಂದು ಬಂಟ್ವಾಳ ತಾಲೂಕು ಕೃಷಿ ನಿರ್ದೇಶಕರ ಕಚೇರಿಯಲ್ಲಿ ಸಹಕಾರಿ ಅಧ್ಯಕ್ಷ ರಾಜಾ ಬಂಟ್ವಾಳ್ ಅಧ್ಯಕ್ಷತೆಯಲ್ಲಿ ನಡೆಯಿತು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಚೆನ್ನಕೇಶವಮೂರ್ತಿ ಮಾತನಾಡಿ ರೈತ ಉತ್ಪಾದಕರ ಕಂಪನಿ (ಎಫ್ ಪಿ ಒ )
ಮಾಡುವ ಕುರಿತು, ಕೇಂದ್ರ ಸರಕಾರದ ನಿಯಮಾವಳಿ, ಕೇಂದ್ರ ಮತ್ತು ರಾಜ್ಯ ಸರಕಾರದ ಸಹಾಯ, ರೈತರಿಗೆ ಸಿಗುವ ಸವಲತ್ತು ಬಗ್ಗೆ ತಿಳಿಸಿದರು.
ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜೊ ಪ್ರದೀಪ್ ಡಿಸೋಜಾ ಮಾಹಿತಿ ನೀಡಿದರು.
ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಹರ್ಷಿತ್ ಸ್ವಾಗತಿಸಿ, ಸಹಕಾರಿ ನಿರ್ದೇಶಕ ಪ್ರೇಮನಾಥ್ ಶೆಟ್ಟಿ ವಂದಿಸಿದರು.

Related Articles

Back to top button