ಆಯಿಷಾ ಹಜ್ಜುಮ್ಮ ನಿಧನ-ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್ ತೆಕ್ಕಿಲ್ ಗೆ ಭೇಟಿ -ಸಾಂತ್ವನ…

ಸುಳ್ಯ: ಸಂಪಾಜೆ ಪೇರಡ್ಕ ಗೂನಡ್ಕ ಮೊಹಿಯುದ್ದಿನ್ ಜುಮಾ ಮಸೀದಿ ಮಾಜಿ ಅಧ್ಯಕ್ಷರು ಅರಂತೋಡು ಎ ಎಚ್ ವೈ ಎ ಸ್ಥಾಪಕಾಧ್ಯಕ್ಷರಾದ ಟಿ ಎಂ ಬಾವ ಹಾಜಿ ತೆಕ್ಕಿಲ್ ಅವರ ಪತ್ನಿ ಪೊನ್ನಂಬಿಲಾತ್ ಪಾರಪ್ರವನ್ ಇರಿಂಘತ್ ನಾರಾನತ್ ಆಯಿಷಾ ಹಜ್ಜುಮ್ಮ ಅವರ ನಿಧನದ ಹಿನ್ನಲೆಯಲ್ಲಿ ಕರ್ನಾಟಕ ಸರಕಾರದ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್ ತೆಕ್ಕಿಲ್ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಟಿ ಎಂ ಶಾಹಿದ್ ತೆಕ್ಕಿಲ್, ಟಿ ಎಂ ಜಾವೆದ್ ತೆಕ್ಕಿಲ್ ಟಿ ಎಂ ಶಾಜ್ ತೆಕ್ಕಿಲ್,ಸುಡ ಅಧ್ಯಕ್ಷರಾದ ಕೆ ಎಂ ಮುಸ್ತಾಫ, ಕಾಂಗ್ರೆಸ್ ಮುಖಂಡರಾದ ತೇಜಸ್ವಿ, ರಾಧಕೃಷ್ಣ ಬೊಳ್ಳೂರು, ಇಕ್ಬಲ್ ಎಲಿಮಲೆ, ಗೋಕುಲದಾಸ್,ಪಿ ಎ ಮಹಮದ್, ಶಶಿಧರ್ ಎಂ ಜೆ,ಸಲೀಂ ಪೆರುಂಗೋಡಿ,ಶರೀಫ್ ಕಂಠಿ, ಸಿದ್ದಿಕ್ ಕೊಕೊ, ಭವಾನಿಶಂಕರ, ಇಂಟಕ್ ಅಧ್ಯಕ್ಷ ರಾದ ಶಾಫಿ ಸುಳ್ಯ, ಶಾಹಿದ್ ಪಾರೆ, ಝುಬೈರ್ ಅರಂತೋಡು, ತಾಜುದ್ದಿನ್ ಟರ್ಲಿ, ಇಕ್ಬಾಲ್ ಪೆರಿಗೇರಿ, ತಾಜುದ್ದೀನ್ ಅರಂತೋಡು ಉಪಸ್ಥಿತರಿದ್ದರು. ಆಯಿಷಾ ಹಜ್ಜುಮ್ಮ ಅವರ ನಿಧನಕ್ಕೆ ಸಮಸ್ತದ ಅಧ್ಯಕ್ಷರಾದ ಜಿಫ್ರಿ ಮುತ್ತುಕೋಯ ತಂಘಳ್, ಪಾನಕ್ಕಾಡ್ ಸಾದಿಕ್ ಅಲಿ ಶಿಹಾಬ್ ತಂಘಳ್, ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್, ಸ್ಪೀಕರ್ ಯು ಟಿ ಖಾದರ್,ಪಿ ಡಬ್ಲ್ಯೂ ಡಿ ಸಚಿವ ಸತೀಶ್ ಜಾರಕಿಹೊಳಿ, ಕೇರಳ ಪಿಸಿಸಿ ಅಧ್ಯಕ್ಷರಾದ ಸನ್ನಿ ಜೋಸೆಫ್, ಕೇರಳದ ವಿರೋಧ ಪಕ್ಷದ ನಾಯಕ ವಿ ಡಿ ಸತೀಷನ್,ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮಂಜುನಾಥ್ ಭಂಡಾರಿ ಎಂ ಎಲ್ ಸಿ,ಕೇರಳ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಬೀ ಮೇತರ್ ಎಂ ಪಿ, ಏನೆಪೋಯ ಅಬ್ದುಲ್ಲ ಕುಂಞಿ, ಮಾಜಿ ಸಚಿವ ಅಹಮದ್ ದೇವರಕೊವಿಲ್,ಕಾಸರಗೋಡು ಶಾಸಕ ಎನ್ ಎ ನೆಲ್ಲಿಕುನ್ನ್ ಸಹಿತ ಕರ್ನಾಟಕ ಹಾಗು ಕೇರಳ ರಾಜ್ಯದ ಹಲವಾರು ಶಾಸಕರು ರಾಜಕೀಯ, ಧಾರ್ಮಿಕ ಪಂಡಿತರು, ಅಧಿಕಾರಿ ವರ್ಗದವರು, ಸಾಮಾಜಿಕ ಮುಖಂಡರು ಮನೆಗೆ ಭೇಟಿ ನೀಡಿ/ದೂರವಾಣಿ ಮುಖಾಂತರ ಸಂತಾಪ ಸೂಚಿಸಿದ್ದಾರೆ.