ಶಿಕ್ಷಕಿ ಶಾಂತಾ ಪುತ್ತೂರುರವರಿಗೆ ಸನ್ಮಾನ…

ಪುತ್ತೂರು: ಶಿವಬ್ರಾಹ್ಮಣ ಸಮಾಜ ಸೇವಾ ಸಂಘ ,ಶಂಕರ ಪ್ರತಿಷ್ಠಾನ ಪುತ್ತೂರು,ಮಿತ್ರ ಸಮಾಜ ಪುತ್ತೂರು ಸಹಯೋಗದಲ್ಲಿ ಸತ್ಯ ನಾರಾಯಣ ಪೂಜೆ,ಶಂಕರ ಜಯಂತಿ,ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಪುತ್ತೂರಿನ ಕಲ್ಲಾರೆಯ ಶಿವಕೃಪಾ ಸಭಾಭವನದಲ್ಲಿ ಮೇ.25 ರಂದು ನಡೆಯಿತು.ಈ ಸಂದರ್ಭದಲ್ಲಿ ಬೊಳುವಾರು ನಿವಾಸಿ ಸರಕಾರಿ ಪ್ರೌಢಶಾಲೆ ಕಬಕದ ಶಿಕ್ಷಕಿ ಶಾಂತಾ ಪುತ್ತೂರುರವರಿಗೆ ಗೌರವ ಡಾಕ್ಟರೇಟ್ ಪಡೆದದ್ದಕ್ಕಾಗಿ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಶಿವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಶ್ರೀ.ಎನ್.ಕೆ.ಜಗನ್ನಿವಾಸ್ ರಾವ್, ಶಂಕರ ಪ್ರತಿಷ್ಠಾನ ಪುತ್ತೂರು ಅಧ್ಯಕ್ಷರಾದ ಪ್ರಸಾದ್ ಶಾನಬಾಗ್, ಮಿತ್ರ ಸಮಾಜದ ಅಧ್ಯಕ್ಷರಾದ ಎಚ್.ವಿ.ರವೀಂದ್ರ, ಶಿವಬ್ರಾಹ್ಮಣ ಸಮಾಜ ಸೇವಾ ಸಂಘದ ಕಾರ್ಯದರ್ಶಿ ವಿ.ಬಾಲಕೃಷ್ಣ ರಾವ್, ಡಾ.ಗೀತಾಕುಮಾರಿ ಟಿ. , ಸತೀಶ್ ರಾವ್ ಕಬಕ,ವನಿತಾ ಎಸ್ ರಾವ್, ರಾಧಾಕೃಷ್ಣ ಭಟ್ ಕೊಡಿಪ್ಪಾಡಿ, ಸೂರ್ಯ ನಾರಾಯಣ ಭಟ್ ಕೊಡಿಪ್ಪಾಡಿ ಉಪಸ್ಥಿತರಿದ್ದರು.