ನ.13 – ಅರಂತೋಡಿನಲ್ಲಿ ನಾಲ್ಕನೇ ತೆಕ್ಕಿಲ್ ಸೋಕರ್ ಫುಟ್ ಬಾಲ್ ಪಂದ್ಯಾಟ…

ಸುಳ್ಯ: ಬೆಟಾಲಿಯನ್ ಎಫ್.ಸಿ ಹಾಗೂ ತೆಕ್ಕಿಲ್ ಪ್ರತಿಷ್ಠಾನ ಅರಂತೋಡು ಇವುಗಳ ಜಂಟಿ ಆಶ್ರಯದಲ್ಲಿ ನವೆಂಬರ್ 13 ರಂದು ಅರಂತೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ “ನಾಲ್ಕನೇ ತೆಕ್ಕಿಲ್ ಸೋಕರ್ ಲೀಗ್ ಪುಟ್ ಬಾಲ್ ಪಂದ್ಯಾಟ” ನಡೆಯಲಿದೆ.
ತಾಲೂಕಿನ ಪ್ರತಿಷ್ಠಿತ 25 ತಂಡಗಳು ಭಾಗವಹಿಸುವ ನಿರೀಕ್ಷೆ ಇದ್ದು, ಪ್ರಥಮ ಸ್ಥಾನ ಪಡೆದವರಿಗೆ ರೂ. 4044 ನಗದು ಹಾಗೂ ತೆಕ್ಕಿಲ್ ಟ್ರೋಪಿ ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ.2022 ನಗದು ಹಾಗೂ ತೆಕ್ಕಿಲ್ ಟ್ರೋಪಿ ಮತ್ತು ವೈಯಕ್ತಿಕ ಪ್ರಶಸ್ತಿಯನ್ನು ನೀಡಲಾಗುವುದು.
ಪಂದ್ಯಾಕೂಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ.ಎಂ ಶಹೀದ್ ತೆಕ್ಕಿಲ್ ವಹಿಸಲಿದ್ದು, ಉದ್ಘಾಟನೆಯನ್ನು ಅರಂತೋಡು – ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆಯವರು ನೆರವೇರಿಸಲಿದ್ದಾರೆ. ಸಂಜೆ ನಡೆಯುವ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ಸಂಪಾಜೆ ಗ್ರಾಮ ಪಂಚಾಯತ್ ನ ಅಧ್ಯಕ್ಷ ಜಿ.ಕೆ ಹಮೀದ್ ಗೂನಡ್ಕ ವಹಿಸಲಿದ್ದು, ಬಹುಮಾನ ವಿತರಣೆಯನ್ನು ಅರಂತೋಡು ಗ್ರಾಮ ಪಂಚಾಯತ್ ಸದಸ್ಯ ಶಿವಾನಂದ ಕುಕ್ಕುಂಬಳರವರು ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ.ಉಸ್ತುವಾರಿ ಕೃಷ್ಣಪ್ಪ, ಜಗದೀಶ್ ರೈ ಕಲ್ಲುಗುಂಡಿ, ದಯಾನಂದ ಕುರಂಜಿ, ಶರೀಫ್ ಕಂಠಿ ಸುಳ್ಯ, ಅಬೂಸಶಾಲಿ ಗೂನಡ್ಕ, ಪುಷ್ಪ ಮೇದಪ್ಪ, ದಿನಕರ ಸಣ್ಣಮನೆ, ಅಶ್ರಫ್ ಗುಂಡಿ, ಸುರೇಶ್ ಉಳುವಾರು, ಸೈಫುದ್ದೀನ್ ಪಟೇಲ್, ಪುಷ್ಪಾದರ ಕೊಡಂಕೇರಿ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ ಹಾಗೂ ಸಮಾರಂಭದಲ್ಲಿ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾದ ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಕುಮಾರಿ ಸ್ವಾತಿ ಮೇರ್ಕಜೆ ಮತ್ತು ರಾಜ್ಯ ಮಟ್ಟದ ಫುಟ್ ಬಾಲ್ ಪಂದ್ಯಾಟಕ್ಕೆ ಆಯ್ಕೆಯಾದ ಅದ್ ನಾನ್ ಪಟೇಲ್ ರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರಾದ ಮೊಹಮ್ಮದ್ ಅರ್ಷಾದ್ ಗುಂಡಿ ಮತ್ತು ನಿಝಾರ್ ಸಂಟ್ಯಾರ್ ತಿಳಿಸಿದ್ದಾರೆ.

Related Articles

Back to top button