ಕೇಪು ದೇವಳದಲ್ಲಿ ಹಿರಿಯರ ಸೇವಾ ಪ್ರತಿಷ್ಠಾನದ ಸಭೆ…

ಬಂಟ್ವಾಳ:ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ( ರಿ) ಮೆಲ್ಕಾರ್ ಬಂಟ್ವಾಳ ಇದರ ಕೇಂದ್ರ ಸಮಿತಿಯ ಸಭೆಯನ್ನು ಕೇಪು ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ವೇದಮೂರ್ತಿ ಶ್ರೀ ಸೂರ್ಯನಾರಾಯಣ ಕೇಕುಣ್ಣಾಯರು ಜ್ಯೋತಿ ಬೆಳಗಿಸಿ ಉದ್ಘಾಟಿಸಿ, ಪ್ರತಿಷ್ಠಾನ ನಡೆಸುತ್ತಿರುವ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷರಾದ ಕಯ್ಯೂರು ನಾರಾಯಣ ಭಟ್ ವಹಿಸಿದ್ದರು. ಪ್ರತಿಷ್ಠಾನದ ವತಿಯಿಂದ ಸ್ಥಾಪಿಸಲು ಉದ್ದೇಶಿಸಿರುವ ಸೇವಾ ಸಹಕಾರಿ ಸಂಘದ ಪ್ರಗತಿಯ ಬಗ್ಗೆ ಮತ್ತು ಶಂಕರ ಪ್ರತಿಷ್ಠಾನ ಬಂಟ್ವಾಳ ಇದರ ಸಹಯೋಗದಲ್ಲಿ ಶಂಕರ ಜಯಂತಿ ಸಪ್ತಾಹ ಕಾರ್ಯಕ್ರಮವನ್ನು ವಿವಿಧ ಕಡೆಗಳಲ್ಲಿ ನಡೆಸುವ ಬಗ್ಗೆ ಮಾಹಿತಿಯನ್ನು ನೀಡಿದರು.
ಕಾನ ಈಶ್ವರ ಭಟ್ ,ಗುಂಡ್ಯಡ್ಕ ಈಶ್ವರ ಭಟ್, ಉದಯ ಶಂಕರ ರೈ ಪುಣಚ, ಎ.ಕೃಷ್ಣಶರ್ಮ ಅನಾರು,ಭವಾನಿಶಂಕರ ಶೆಟ್ಟಿ ಪುತ್ತೂರು,ಕಾನ ಸುಂದರ ಭಟ್, ಚಂದ್ರಶೇಖರ ಆಳ್ವ ಪಡುಮಲೆ ಮತ್ತು ಸ್ಥಳೀಯ ಪ್ರಮುಖರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.
ಆರಂಭದಲ್ಲಿ ಸಾಮೂಹಿಕ ಭಜನೆ, ಪೌರಾಣಿಕ ಕಥಾ ಮಾಲಿಕೆಯಲ್ಲಿ ಕಚ- ದೇವಯಾನಿ ಪ್ರಕರಣದ ಬಗ್ಗೆ ನಾರಾಯಣ ಭಟ್ ವ್ಯಾಖ್ಯಾನ ಮಾಡಿದರು.
ಡಾ. ಬಿ.ಎನ್ ಮಹಾಲಿಂಗ ಭಟ್ ಕಾರ್ಯಕ್ರಮ ನಿರೂಪಿಸಿದರು.

Sponsors

Related Articles

Back to top button