ಬಂಟ್ವಾಳದಲ್ಲಿ ಭಾರಿ ಪೊಲಿಟಿಕಲ್ ಹೈಡ್ರಾಮ- ಜಿಲ್ಲಾ ಕಾಂಗ್ರೆಸ್ ನ ಹಿಂದುಳಿದ ವರ್ಗಗಳ ಅಧ್ಯಕ್ಷ ಬಿಜೆಪಿ ಸೇರ್ಪಡೆ …

ಮಂಗಳೂರು : ಜಿಲ್ಲಾ ಕಾಂಗ್ರೆಸ್ ನ ಹಿಂದುಳಿದ ವರ್ಗಗಳ ಅಧ್ಯಕ್ಷ ಮಾದವ ಮಾವೆ,ಮಾಣಿ ಜಿ.ಪಂ ಸದಸ್ಯೆ ಮಂಜುಳಾ ಮಾವೆ,ಕನ್ಯಾನ ತಾ.ಪಂ ಸದಸ್ಯ ಕುಮಾರ್ ಭಟ್ ಇವರು ತಮ್ಮ ನೂರಾರು ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಗೊಂಡರು.

ದ.ಕ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು,ದ.ಕ ಜಿಲ್ಲಾಧ್ಯಕ್ಷ ಸುದರ್ಶನ್,ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ,ಬಂಟ್ವಾಳ ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ,ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿಯ ಮೊದಲಾದವರು ಉಪಸ್ಥಿತರಿದ್ದರು.
ಇದೀಗ ಪಂಚಾಯತ್ ಚುನಾವಣೆ ಕೇವಲ ನಾಲ್ಕು ದಿನಗಳಿರುವಾಗ ಕಾಂಗ್ರೆಸ್ ಪಕ್ಷ ಇಬ್ಬಾಗಗೊಂಡಂತಾಗಿದೆ. ನಾಯಕತ್ವದ ಕೊರತೆಯಿಂದ, ಸತತ ಸೋಲಿನ ವೈಫಲ್ಯದಿಂದ ಬೇಸತ್ತು ಬಂಟ್ವಾಳದ ಇನ್ನಷ್ಟು ಕಾಂಗ್ರೆಸ್ ನಾಯಕರುಗಳು ಬಿಜೆಪಿಗೆ ಸೇರ್ಪಡೆಗೆ ತಯಾರಿದ್ದು, ಬಿಜೆಪಿ ನಾಯಕರುಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.

330e76e5 A8e9 4e55 83c5 F401cc4109b7 300x200 6d2c44e1 B6f8 4d46 A98e E8f82bcee0f0 300x200

Related Articles

Leave a Reply

Your email address will not be published. Required fields are marked *