ಮಾಣಿ ಲಯನ್ಸ್ ಕ್ಲಬ್ ಪದಗ್ರಹಣ ಸಮಾರಂಭ…
ಸಮಾಜ ಸೇವೆಯಿಂದ ಉತ್ತಮ ನಾಯಕರಾಗಿ – ಲ|ಅನಿಲ್ ಕುಮಾರ್...

ಬಂಟ್ವಾಳ:ಮಾಣಿ ಲಯನ್ಸ್ ಕ್ಲಬ್ ಪದಗ್ರಹಣ ಸಮಾರಂಭ ಆ. 11ರಂದು ನಡೆಯಿತು.
ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿದ ಲಯನ್ಸ್ ಜಿಲ್ಲಾ ಸಂಯೋಜಕ ಪಿ.ವಿ. ಅನಿಲ್ ಕುಮಾರ್ ಮಾತನಾಡಿ ಲಯನ್ಸ್ ಕ್ಲಬ್ ಸದಸ್ಯರಾಗಿ ಸಮಾಜಸೇವೆ ಮಾಡಿ ಜನನಾಯಕರಾಗಿ ಎಂದು ಕರೆ ನೀಡಿದರು.
ಅವರು ಮಾಣಿಯ ಪದ್ಮ ಮಿನಿ ಹಾಲ್‌ನಲ್ಲಿ ಜರಗಿದ ಕಾರ್ಯಕ್ರಮದಲ್ಲಿ ನೂತನ ತಂಡಕ್ಕೆ ಪ್ರಮಾಣವಚನ ಬೋಧಿಸಿ ಮಾತನಾಡಿದರು.
ಪ್ರಾಂತ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ,ವಿಭಾಗಾಧ್ಯಕ್ಷ ರಾಧಾಕೃಷ್ಣ ಬಂಟ್ವಾಳ್ ಅತಿಥಿಗಳಾಗಿ ಅಭಿನಂದನಾ ಭಾಷಣ ಮಾಡಿದರು.
ಲಯನ್ಸ್ ಕ್ಲಬ್ ಮಾಣಿ ಇದರ 2025-26ನೇ ಸಾಲಿನ ಅಧ್ಯಕ್ಷರಾಗಿ ಜನಾರ್ದನ ಪೆರಾಜೆ , ಕಾರ್ಯದರ್ಶಿಯಾಗಿ ರತ್ನಾಕರ ರೈ ಮಾಣಿ, ಕೋಶಾಧಿಕಾರಿಯಾಗಿ ರಾಜೇಶ್ ಶೆಟ್ಟಿ ಅಧಿಕಾರ ಸ್ವೀಕರಿಸಿದರು.
ಸ್ಥಾಪಕ ಅಧ್ಯಕ್ಷ ಗಂಗಾಧರ ರೈ ಮಾಣಿ ನೂತನ ತಂಡಕ್ಕೆ ಶುಭ ಹಾರೈಸಿ ಮಾತನಾಡಿದರು. ಉಪಾಧ್ಯಕ್ಷರಾಗಿ ವಿನ್ಸೆಂಟ್ ಲಸ್ರಾದೋ, ರೊನಾಲ್ಡ್ ಮೊನಿಸ್ ಜೊತೆ ಕಾರ್ಯದರ್ಶಿಯಾಗಿದ್ದಾರೆ. ಸೇವಾಧ್ಯಕ್ಷರಾಗಿ ಡಾ. ಮನೋಹರ ರೈ, ಕೂಸಪ್ಪ ಪೂಜಾರಿ, ಉಮೇಶ್ ಪಿ., ರವಿಕಿರಣ್ ಶೆಟ್ಟಿ , ಗಣೇಶ್ ಪೂಜಾರಿ, ಕೆ.ಎನ್ ಗಂಗಾಧರ ಆಳ್ವ, ಡಾ. ಶ್ರೀನಾಥ್ ಆಳ್ವ, ವಿನ್ಸೆಂಟ್ ಪಾಯಸ್, ಡಾ. ಜಗದೀಶ್ ಭಟ್, ನಿಕಟಪೂರ್ವ ಅಧ್ಯಕ್ಷ ರಾಮಕಿಶನ್ ರೈ ಮೊದಲಾದವರು ಉಪಸ್ಥಿತರಿದ್ದರು. ನೂತನ ಸದಸ್ಯರಾಗಿ ಜಯಾನಂದ ಪೆರಾಜೆ, ಉಮೇಶ್ ಅಶ್ವತ್ತಡಿ, ಅನಿಲ್ ಕುಮಾರ್ ಪೆರಾಜೆ, ಸಚ್ಚಿದಾನಂದ ರೈ ಪಾಳ್ಯ ಪ್ರಮಾಣವಚನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಪೆರಾಜೆ ಗುತ್ತು ಶ್ರೀಕಾಂತ್ ಆಳ್ವ , ಮಾಣಿಗುತ್ತು ಸಚಿನ್ ರೈ ಇವರನ್ನು ಧಾರ್ಮಿಕ ಸೇವೆಗಾಗಿ ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ. ಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಕರ್ನಾಟಕ ಪ್ರೌಢ ಶಾಲೆ ಮಾಣಿ, ಸರಕಾರಿ ಪ್ರೌಢ ಶಾಲೆ ಕಡೇಶಿವಾಲಯ, ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಪೆರಾಜೆ ಇಲ್ಲಿನ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು.