ಬಂಟ್ವಾಳ ನೇತ್ರಾವತಿ ಸಂಗಮದ ಅಧ್ಯಕ್ಷರಾಗಿ ಆದಿರಾಜ್ ಜೈನ್ ಆಯ್ಕೆ…

ಬಂಟ್ವಾಳ: ಸೀನಿಯರ್ ಚೇಂಬರ್ ಇಂಟರ್ ನ್ಯಾಶನಲ್ ಬಂಟ್ವಾಳ ನೇತ್ರಾವತಿ ಸಂಗಮದ ಅಧ್ಯಕ್ಷರಾಗಿ ಹಿರಿಯ ಜೇಸಿ , ಕೃಷಿಕ ಆದಿರಾಜ ಜೈನ್ ಕೆ. ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಉದ್ಯಮಿ, ಸಾಮಾಜಿಕ ಕಾರ್ಯಕರ್ತ ತಾರಾನಾಥ ಕೊಟ್ಟಾರಿ ಫರಂಗಿಪೇಟೆ, ಕೋಶಾಧಿಕಾರಿಯಾಗಿ ಇಂಜಿನಿಯರ್ ನಾಗೇಶ್ ಕುಲಾಲ್ ಆಯ್ಕೆಯಾಗಿದ್ದಾರೆ ಎಂದು ಲೀಜನ್ ಸ್ಥಾಪಕ ಅಧ್ಯಕ್ಷ ಜಯಾನಂದ ಪೆರಾಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಕಟಪೂರ್ವ ಅಧ್ಯಕ್ಷ ಡಾ. ಆನಂದ ಬಂಜನ್, ತರಬೇತಿ ವಿಭಾಗದ ಉಪಾಧ್ಯಕ್ಷರಾಗಿ ನ್ಯಾಯವಾದಿ ಶೈಲಜಾ ರಾಜೇಶ್, ಆಡಳಿತವಿಭಾಗದ ಉಪಾಧ್ಯಕ್ಷರಾಗಿ ನ್ಯಾಯವಾದಿ ರವೀಂದ್ ಕುಕ್ಕಾಜೆ, ಸಾರ್ವಜನಿಕ ಸಂಪರ್ಕ ಉಪಾಧ್ಯಕ್ಷರಾಗಿ ಸತ್ಯನಾರಾಯಣ ರಾವ್ ಕೈಕುಂಜೆ , ಕಾರ್ಯದರ್ಶಿಯಾಗಿ ತಾರನಾಥ ಕೊಟ್ಟಾರಿ, ಜತೆಕಾರ್ಯದರ್ಶಿಯಾಗಿ ಪಿ.ಮಹಮ್ಮದ್ , ನಿರ್ದೇಶಕರಾಗಿ ಜಯಾನಂದ ಪೆರಾಜೆ , ರಾಮಚಂದ್ರ ರಾವ್ ಆಯ್ಕೆಯಾಗಿರುತ್ತಾರೆ. ಹದಿನೈದು ಮಂದಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನೇಮಕವಾಗಿದ್ದಾರೆ.

vice president

Related Articles

Back to top button