ಹಣಕ್ಕಾಗಿ ಬ್ಲ್ಯಾಕ್ ಮೇಲ್ – ನಕಲಿ ಪತ್ರಕರ್ತನ ವಿರುದ್ಧ ದೂರು….

ಬಂಟ್ವಾಳ: ಎಸ್.ವಿ.ಎಸ್ ಆಂಗ್ಲಮಾಧ್ಯಮ ಶಾಲೆಯ ವಿವಾದವೊಂದಕ್ಕೆ ಸಂಬಂಧಿಸಿ ಸಿದ್ದಕಟ್ಟೆ ನಿವಾಸಿ ಅಶೋಕ್ ಹಲಾಯಿ ಎಂಬಾತ ತಾನು ಖಾಸಗಿ ನ್ಯೂಸ್ ಚಾನೆಲ್ ಒಂದರ ಕ್ಯಾಮರಾಮೆನ್ ಎಂದು ಹೇಳಿಕೊಂಡು ಅ.3 ರ ಗುರುವಾರ ಎಸ್.ವಿ.ಎಸ್ ಶಿಕ್ಷಣ ಸಂಸ್ಥೆಗೆ ಸಂಬಂಧಿಸಿದ ಸುದ್ದಿ ಪ್ರಸಾರವಾಗದಂತೆ ಮಾಡಲು ತನಗೆ 50 ಸಾವಿರ ನೀಡುವಂತೆ ಬೇಡಿಕೆ ಇಟ್ಟಿದ್ದ.ಸಂಸ್ಥೆಯ ಆಡಳಿತ ಮಂಡಳಿಯವರು ಆತನ ಬ್ಲ್ಯಾಕ್ ಮೇಲ್ ಗೆ‌ ಮಣಿದು 50 ಸಾವಿರದ ಚೆಕ್ ನೀಡಿದ್ದಾರೆ. ಆ ಬಳಿಕ ಶಿಕ್ಷಣ ಸಂಸ್ಥೆಯವರು ಅದೇ ಖಾಸಗಿ ಚಾನೆಲ್ ನ ಮಂಗಳೂರು ವರದಿಗಾರರನ್ನ ಸಂಪರ್ಕಿಸಿದಾಗ ಅಶೋಕ್ ಹಲಾಯಿ ಎಂಬಾತ ನಕಲಿ ಪತ್ರಕರ್ತ ಎನ್ನುವುದು ಬೆಳಕಿಗೆ ಬಂದಿದೆ. ಚಾನೆಲ್ ನ ಅಧಿಕೃತ ಮಂಗಳೂರು ವರದಿಗಾರರು ಆತನಿಗೆ ಕರೆ ಮಾಡಿ ಪೊಲೀಸ್ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ ಬಳಿಕ ಆತ ಚೆಕ್ ಅನ್ನು ಶಿಕ್ಷಣ ಸಂಸ್ಥೆಗೆ ವಾಪಾಸ್ ಕೊಟ್ಟು ಕ್ಷಮೆ ಕೇಳಿದ್ದಾನೆ. ಈತನ ವಿರುದ್ದ ಎಸ್.ವಿ.ಎಸ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಬಂಟ್ವಾಳ ನಗರ ಠಾಣೆಗೆ ದೂರು ನೀಡಿದೆ.

IMG 20191003 203500 204x300

IMG 20191003 203530 253x300

Related Articles

Leave a Reply

Your email address will not be published. Required fields are marked *