ರಾಹುಲ್ ಗಾಂಧಿ ವಿರುದ್ಧ ಯಾಕಿಷ್ಟು ಕಠಿಣ ನಿರ್ಧಾರ? ಸುಪ್ರೀಂ ಕೋರ್ಟ್ ಪ್ರಶ್ನೆ – ಟಿ ಎಂ ಶಾಹಿದ್ ತೆಕ್ಕಿಲ್ ಸ್ವಾಗತ…

ಸುಳ್ಯ: ರಾಹುಲ್ ಗಾಂಧಿಯವರ ಸಂಸತ್ ಸದಸ್ಯ ಸ್ಥಾನವನ್ನು ಅನರ್ಹ ಮಾಡಿದ ಸೂರತ್ ಕೋರ್ಟ್ ನ ಗರಿಷ್ಟ ಶಿಕ್ಷೆ ತೀರ್ಮಾನವನ್ನು ಕಟು ಶಬ್ದದಿಂದ ವಿಮರ್ಶಿಸಿ, ಯಾಕೆ ರಾಹುಲ್ ಗಾಂಧಿ ಯವರಿಗೆ ಕಟು ಶಿಕ್ಷೆ ಎಂದು ಪ್ರಶ್ನೆಯನ್ನು ಕೇಳಿದ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಇದನ್ನು ಕೆಪಿಸಿಸಿ ಮುಖ್ಯ ವಕ್ತಾರ ಟಿ ಎಂ ಶಾಹಿದ್ ತೆಕ್ಕಿಲ್ ಸ್ವಾಗತಿಸಿದ್ದಾರೆ.
ಇದು ರಾಹುಲ್ ಗಾಂಧಿ ಹಾಗು ವಯಾನಾಡ್ ಕ್ಷೇತ್ರದ ಜನತೆಗೆ ಮಾಡಿದ ಶಿಕ್ಷೆ ಯಾಗಿದೆ. ಮಾತ್ರವಲ್ಲದೆ ಈ ಶಿಕ್ಷೆ ಯಾಕೆ ಇಷ್ಟು ಕಠೋರ ಎಂದು ಪ್ರಶ್ನಿಸಿದೆ. ತುಗಲಖ್ ರಸ್ತೆಯಲ್ಲಿ ಇರುವ ಮನೆಯನ್ನು ಮುನಃ ನೀಡುವ ನಿರ್ಧಾರ ಸ್ವಾಗತಿಸುವುದಾಗಿ ಕೆಪಿಸಿಸಿ ಮುಖ್ಯ ವಕ್ತಾರ ಟಿ ಎಂ ಶಾಹಿದ್ ತೆಕ್ಕಿಲ್ ತಿಳಿಸಿದ್ದಾರೆ.
ಇದು ನ್ಯಾಯಾಲಯವನ್ನು,ಐ ಟಿ,ಇ ಡಿ, ಸಿ ಬಿ ಐ ಮತ್ತಿತರ ಸಂಸ್ಥೆಗಳನ್ನು ಹತೋಟಿಯಲ್ಲಿಟ್ಟು, ವಿರೋಧ ಪಕ್ಷದ ನಾಯಕರ ಮತ್ತು ವಿರೋಧಿಗಳನ್ನು ಮಟ್ಟಹಾಕುವ ಪ್ರಧಾನಿ ನರೇಂದ್ರ ಮೋದಿ ಹಾಗು ಭಾರತೀಯ ಜನತಾ ಪಕ್ಷಕ್ಕೆ ತೀವ್ರ ಮುಖಭಂಗವಾಗಿದ್ದು, ಸತ್ಯಕ್ಕೆ ಸಂದ ಜಯ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟಿ ಎಂ ಶಾಹಿದ್ ತೆಕ್ಕಿಲ್