ಗಾಂಧಿನಗರ ಮಸ್ಜಿದ್ ನಲ್ಲಿ ಕರೀಂ ಉಸ್ತಾದ್ ಅನುಸ್ಮರಣೆ, ಪ್ರಾರ್ಥನಾ ಸಂಗಮ…
ನಾಲ್ಕು ದಶಕಗಳ ಹಿಂದೆ ಸೇವೆಸಲ್ಲಿಸಿದ, ಗುರುವರ್ಯರಿಗೆ ಶಿಷ್ಯoದಿರ ಮಾದರಿ ಕಾರ್ಯ- ಅಶ್ರಫ್ ಖಾಮಿಲ್ ಸಖಾಫಿ…

ಸುಳ್ಯ: 4 ದಶಕಗಳ ಹಿಂದೆ ಗಾಂಧಿನಗರ ಮದರಸದಲ್ಲಿ ಮುಅಲ್ಲಿo ಆಗಿ ಸೇವೆ ಸಲ್ಲಿಸಿ, ಸಾವಿರಾರು ಶಿಷ್ಯ ವರ್ಗವನ್ನು ಹೊಂದಿ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದು, ಕನ್ನಾಡಿ ಉಸ್ತಾದ್ ಎಂದೇ ಖ್ಯಾತರಾದ ಕರೀಂ ಉಸ್ತಾದ್ ಕುಂಬ್ರ ಇತ್ತೀಚೆಗೆ ನಿಧನ ಹೊಂದಿದ್ದು, ಮೃತರ ಮಗಫಿರತ್ ಗಾಗಿ ವಿಶೇಷ ಪ್ರಾರ್ಥನಾ ಸಂಗಮ ಇಂದು ಗಾಂಧಿನಗರ ಜುಮ್ಮಾ ಮಸ್ಜಿದ್ ಮತ್ತು ಅನ್ಸಾರಿಯಾ ಜುಮ್ಮಾ ಮಸ್ಜಿದ್ ನಲ್ಲಿ ಜರಗಿತು.
ಖತೀಬರಾದ ಅಲ್ಹಾಜ್ ಅಶ್ರಫ್ ಖಾಮಿಲ್ ಸಖಾಫಿ ನೇತೃತ್ವ ನೀಡಿದರು.ಯಾಸೀನ್ ಪಾರಾಯಣ, ದುವಾ ಮಜ್ಲಿಸ್ ನಂತರ ಅನ್ನದಾನ ನಡೆಯಿತು.