ಬಿ ಸಿ ರೋಡು – ಕಾನೂನು ಸೇವೆಗಳ ಮಾಹಿತಿ ಮತ್ತು ಕನ್ನಡ ನಾಟಕ ಕಾರ್ಯಕ್ರಮ…
ಬಂಟ್ವಾಳ: ನಾಟಕ ಮಾಧ್ಯಮದ ಮೂಲಕ ಕಾನೂನಿನ ವಿಚಾರಗಳನ್ನು ಜನಸಾಮಾನ್ಯರಿಗೆ ತಲುಪಿಸುವುದು ಪರಿಣಾಮಕಾರಿಯಾಗಿರುತ್ತದೆ. ಕಾನೂನನ್ನು ಗೌರವಿಸಿದಾಗ ಮಾತ್ರ ಸುಸಂಸ್ಕೃತ ಸಮಾಜ ನಿರ್ಮಾಣವಾಗುತ್ತದೆ ಎಂದು ಬಂಟ್ವಾಳ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಹಿರಿಯ ಸಿವಿಲ್ ನ್ಯಾಯಧೀಶರಾದ ಬಾಲಗೋಪಾಲ ಕೃಷ್ಣ ಹೇಳಿದರು.
ಅವರು ಬಿ.ಸಿ.ರೋಡಿನಲ್ಲಿ ಕಾನೂನು ಸೇವೆಗಳ ಮಾಹಿತಿ ಮತ್ತು ಕನ್ನಡ ನಾಟಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನ್ಯಾಯಾಧೀಶರುಗಳಾದ ರಮ್ಯ ಹೆಚ್.ಆರ್. , ಶಿಲ್ಪ ಜಿ. ತಿಮ್ಮಾಪುರ, ಅಮೃತಾ ಎಸ್. ರಾವ್ ಅತಿಥಿಗಳಾಗಿದ್ದರು.
ಹಿರಿಯ ನ್ಯಾಯವಾದಿ ಪುಂಡಿಕಾಯಿ ನಾರಾಯಣ ಭಟ್ ರಂಗಭೂಮಿ ಮತ್ತು ಕಾನೂನು ಬಗ್ಗೆ ವಿಚಾರ ಮಂಡಿಸಿದರು.
ರಂಗಕಲಾವಿದ ,ನ್ಯಾಯವಾದಿ ಶಶಿರಾಜ್ ಕಾವೂರು ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಅವರ ರಚನೆ ನಿರ್ದೇಶನದ ‘ದಾಟ್ಸ್ ಆಲ್ ಯುವರ್ ಆನರ್’ ನಾಟಕವನ್ನು ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ಇವರು ಅಭಿನಯಿಸಿದ್ದು, ಪ್ರೇಕ್ಷಕರ ಮೆಚ್ಚುಗೆ ಗಳಿಸಿತು.
ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಫ್ರೊ. ತುಕರಾಮ್ ಪೂಜಾರಿ , ನ್ಯಾಯವಾದಿ ಬಿ.ಗಣೇಶಾನಂದ ಸೋಮಯಾಜಿ, ಉದ್ಯಮಿ ಜಗನ್ನಾಥ ಚೌಟ ಅತಿಥಿಗಳಾಗಿದ್ದರು.
ವಿಶ್ರಾಂತ ತಹಶೀಲ್ದಾರರು ಕೆ.ಮೋಹನ ರಾವ್ ಅಧ್ಯಕ್ಷತೆ ವಹಿಸಿದ್ದರು. ಜಿ.ಶಿವಶಂಕರ್ ಸ್ವಾಗತಿಸಿದರು. ಪಿ.ಎ. ರಹೀಂ ವಂದಿಸಿದರು.