ಸಂಪಾಜೆ ಗ್ರಾಮ ಪಂಚಾಯತ್ – ಉಚಿತ ಆರೋಗ್ಯ ತಪಾಸಣೆ…

ಸುಳ್ಯ: ಕಾರ್ಮಿಕ ಇಲಾಖೆಯ ಮೂಲಕ ಕಟ್ಟಡ ಇತರೆ ನಿರ್ಮಾಣ ಕಲ್ಯಾಣ ಮಂಡಳಿ ವತಿಯಿಂದ ನಡೆಸಲಾಗುತ್ತಿರುವ ತರಬೇತಿ ಹಾಗೂ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮಕ್ಕೆ ಸಂಪಾಜೆ ಗ್ರಾಮ ಪಂಚಾಯತ್ ಸಬಾಭವನದಲ್ಲಿ ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸೋಮಶೇಖರ್ ಕೊಇಂಗಾಜೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಅಧ್ಯಕ್ಷತೆ ವಹಿಸಿ ಸರ್ವರನ್ನು ಸ್ವಾಗತಿಸಿದರು. ಪಂಚಾಯತ್ ಅಭಿವೃದ್ಧಿ ಅದಿಕಾರಿ ಸರಿತಾ ಡಿಸೋಜಾ, ಪಂಚಾಯತ್ ಸದಸ್ಯರುಗಳಾದ ಜಗದೀಶ್ ರೈ, ಸುಂದರಿ ಮುಂಡಡ್ಕ, ವಿಮಲಾ ಪ್ರಸಾದ್, ಸವಾದ್, ಎಸ್. ಕೆ. ಹನೀಫ್, ಅನುಪಮಾ,ಕಾರ್ಮಿಕ ಘಟಕದ ಪ್ರಸಾದ್, ಶ್ರೀಧರ್,ವಿಜಯ ಅಲಡ್ಕ, ಸುಶೀಲಾ, ಅರೋಗ್ಯ ಇಲಾಖೆಯವರು ಉಪಸ್ಥಿತರಿದ್ದರು. ನೂರಾರು ಜನ ಯೋಜನೆಯ ಸದುಪಯೋಗ ಪಡೆದುಕೊಂಡರು. ಯೋಜನೆಯ ಬಗ್ಗೆ ಸುಬ್ರಮಣಿ ಮಾಹಿತಿಯನ್ನು ನೀಡಿದರು.

Related Articles

Back to top button