ಮೀಫ್ ಉಪಾಧ್ಯಕ್ಷ ಕೆ. ಎಂ. ಮುಸ್ತಫರಿಗೆ ಬಂಟ್ವಾಳ ವಗ್ಗ ಬುರೂಜ್ ಸ್ಕೂಲ್ ನಲ್ಲಿ ಸನ್ಮಾನ…
ಆಧುನಿಕ ತಂತ್ರಜ್ಞಾನ ಯುಗದಲ್ಲಿ ಓದುವ ಹವ್ಯಾಸ ಬೆಳೆಸಿಕೊoಡರೆ ಸ್ಪರ್ಧಾತ್ಮಕ ಪರೀಕ್ಷೆ ಯಲ್ಲಿ ತೇರ್ಗಡೆ ಸಾಧ್ಯ- ನಜೀರ್ ಏಸ್ ಅಕಾಡೆಮಿ...
ಬಂಟ್ವಾಳ: ಬಂಟ್ವಾಳ ತಾಲೂಕು ವಗ್ಗ ಬುರೂಜ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದ. ಕ. ಮತ್ತು ಉಡುಪಿ ಜಿಲ್ಲೆಗಳ ಶಿಕ್ಷಣ ಸಂಸ್ಥೆಗಳ ಒಕ್ಕೂಟ ದ ಉಪಾಧ್ಯಕ್ಷರಾಗಿ ಪುನರಾಯ್ಕೆಗೊಂಡು, ಪೂರ್ವ ವಲಯ ಉಸ್ತುವಾರಿಯಾಗಿ ನೇಮಕಗೊಂಡ ಕೆ. ಎಂ. ಮುಸ್ತಫ ಸುಳ್ಯ ಇವರನ್ನು ವಗ್ಗ ಆಂಗ್ಲ ಮಾಧ್ಯಮ ಶಾಲಾ ಆಡಿಟೋರಿಯಂ ನಲ್ಲಿ ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಹಬೀಬ್ ಅಕಾಡೆಮಿ ಫಾರ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಶೇಖ್ ರಹ್ಮತುಲ್ಲ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರು ಏಸ್ ಅಕಾಡೆಮಿ ನಿರ್ದೇಶಕ ನಝಿರ್ ಮಾತನಾಡಿ ಮೀಫ್ ಶಿಕ್ಷಣ ಸಂಸ್ಥೆಗಳಲ್ಲಿಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ಏಸ್ ತಂಡ ಸಿದ್ದವಾಗಿದ್ದು, ಆಸಕ್ತ ಶಿಕ್ಷಣ ಸಂಸ್ಥೆಯವರು ಸಂಪರ್ಕಿಸಬಹುದು ಎಂದರು. ಸoಪನ್ಮೂಲ ತರಬೇತಿದಾರರಾದ ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜು ಸಮಾಜ ಸೇವಾ ವಿಭಾಗದ ಮುಖ್ಯಸ್ಥರಾದ ಡಾ. ಮೇರಿ ಎಂ ಜೆ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಶಿಕ್ಷಕ -ರಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಅಝೀಜ್,ಪ್ರಾಥಮಿಕ ವಿಭಾಗದ ಎಚ್. ಎಂ. ವಿಮಲಾ, ಪ್ರೌಢಶಾಲಾ ವಿಭಾಗ ಮುಖ್ಯಸ್ಥೆ ಶ್ರೀಮತಿ ಜಯಶ್ರೀ ಸಾಲಿಯಾನ್ ಮೊದಲಾದವರು ಉಪಸ್ಥಿತರಿದ್ದರು.