ಪೇರಡ್ಕ ಗೂನಡ್ಕದಲ್ಲಿ ಎಸ್ಕೆ ಎಸ್‌ಬಿವಿ ಸುಳ್ಯ ರೇಂಜ್ ಸಮಿತಿ ವತಿಯಿಂದ ಇಷ್ಕ್ ಮಜ್ಲಿಸ್…

ಸುಳ್ಯ : ಪ್ರವಾದಿ ಮುಹಮ್ಮದ್ (ಸ) ರ 1500 ನೇ ಜನ್ಮದಿನಾಚರಣೆಯ ಭಾಗವಾಗಿ ಸುಳ್ಯ ರೇಂಜ್ ಎಸ್ಕೆ ಎಸ್‌ಬಿವಿ ವತಿಯಿಂದ ಪೇರಡ್ಕ ತೆಕ್ಕಿಲ್ ಮುಹಮ್ಮದ್ ಹಾಜಿ ಮೆಮೊರಿಯಲ್ ತಖ್ವಿಯತುಲ್ ಇಸ್ಲಾಂ ಮದ್ರಸಾದಲ್ಲಿ ಇಷ್ಕ್ ಮಜ್ಲಿಸ್ ಪ್ರವಾದಿ ಪ್ರಕೀರ್ತನೆ ಸಭೆ ನಡೆಯಿತು.
ಪೇರಡ್ಕ ಜಮಾಅತ್ ಅಧ್ಯಕ್ಷರಾದ ಜನಾಬ್ ಟಿ.ಎಂ ಶಹೀದ್ ತೆಕ್ಕಿಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಳ್ಯ ರೇಂಜ್ ವ್ಯಾಪ್ತಿಯ ವಿವಿಧ ಮದ್ರಸಾಗಳ ವಿದ್ಯಾರ್ಥಿಗಳು ಮೌಲಿದ್ ಮಜ್ಲಿಸ್ ನಡೆಸಿಕೊಟ್ಟರು. ಸುಳ್ಯ ರೇಂಜ್ ಜಂ ಇಯ್ಯತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಶಮೀಂ ಅರ್ಶದಿ ಇಷ್ಕ್ ಮಜ್ಲಿಸಿಗೆ ನೇತೃತ್ವ ನೀಡಿದರು. ಸ್ಥಳೀಯ ಖತೀಬ್ ಅಹ್ಮದ್ ನಈಂ ಮಅಬರಿ ಫೈಝಿ ಮತ್ತು ಅಧ್ಯಕ್ಷರಾದ ಜನಾಬ್ ಟಿ.ಎಂ ಶಹೀದ್ ತೆಕ್ಕಿಲ್ ಶುಭ ಹಾರೈಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅತಿಥಿಗಳಿಗೆ ಎಸ್ಕೆ ಎಸ್‌ಬಿವಿ ಗೂನಡ್ಕ ಶಾಖೆಯ ವತಿಯಿಂದ ಉಡುಗೋರೆ ನೀಡಲಾಯಿತು. ಎಸ್ಕೆ ಎಸ್‌ಬಿವಿ ಸುಳ್ಯ ರೇಂಜ್ ಸಮಿತಿ ಚೇರ್ಮನ್ ಮುಯೀನುದ್ದೀನ್ ಫೈಝಿ ಪೈಂಬಚ್ಚಾಲ್, ಕನ್ವೀನರ್ ಸಾಜಿದ್ ಅಝ್ಹರಿ ಪೇರಡ್ಕ, ವರ್ಕಿಂಗ್ ಕನ್ವೀನರ್ ನೌಶಾದ್ ಅಝ್ಹರಿ ದುಗಲಡ್ಕ, ಶಾಕಿರ್ ಮುಸ್ಲಿಯಾರ್ ಪೇರಡ್ಕ ಗೂನಡ್ಕ, ಹಾರಿಸ್ ಕಾಮಿಲ್ ಅಝ್ಹರಿ ಪೇರಡ್ಕ ಗೂನಡ್ಕ, ಎಂ.ಆರ್.ಡಿ.ಎ ಅಧ್ಯಕ್ಷ ಜಿ.ಕೆ ಹಮೀದ್ ಗೂನಡ್ಕ, ಪೇರಡ್ಕ ಜಮಾಅತ್ ಸಮಿತಿ ಉಪಾಧ್ಯಕ್ಷ ಹನೀಫ್ ಟಿ.ಬಿ, ಕಾರ್ಯದರ್ಶಿಗಳಾದ ಕೆ.ಎಂ ಉಸ್ಮಾನ್ ಅರಂತೋಡು, ಸಿನಾನ್ ಗೂನಡ್ಕ, ಎಂ.ಆರ್.ಡಿ.ಎ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಮೊಟ್ಟೆಂಗಾರ್, ಹಾಗೂ ವಿವಿಧ ಮದ್ರಸಾಗಳ ಅಧ್ಯಾಪಕರು ಮತ್ತು ಆಡಳಿತ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.